Site icon Vistara News

ಹೆಂಡತಿಯ ಮೊದಲ ಗಂಡನನ್ನು ಅಪಹರಿಸಿ ಸಿಕ್ಕಿಬಿದ್ದ; ಫಿಲಂ ಸ್ಟೈಲ್ ಕಿಡ್ನ್ಯಾಪ್‌ಗೆ ಸಾಕ್ಷಿಯಾದ ಕಾಫಿ ನಾಡು

ಕಿಡ್ನಾಪ್‌ಗೆ

ಚಿಕ್ಕಮಗಳೂರು: ಹೆಂಡತಿಗೆ ಸದಾ ಮೆಸೇಜ್‌ ಮಾಡುತ್ತಿದ್ದ ಎಂದು ಆಕೆಯ ಮೊದಲ ಗಂಡನನ್ನು ಎರಡನೇ ಗಂಡನೇ ಕಿಡ್ನ್ಯಾಪ್‌ ಮಾಡಿರುವುದು ಜಿಲ್ಲೆಯಲ್ಲಿ ನಡೆದಿದೆ. ಕಿಡ್ನಾಪ್‌ ಮಾಡಿ ವಾಹನದಲ್ಲಿ ಪರಾರಿಯಾಗುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪ್ರಕರಣದಲ್ಲಿ ಮಹಿಳೆ ಎರಡನೇ ಗಂಡ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಡೂರಿನ ಮೋಹನ್‍ರಾಮ್ ಅಪಹರಣಕ್ಕೊಳಗಾಗಿದ್ದವರು. ಹರಿಯಾಣ ಮೂಲ್ ಬೆಂಗಳೂರು‌ ನಿವಾಸಿ ಆರೋಪಿ 2ನೇ ಪತಿ ಓಂಪ್ರಕಾಶ್, ಶೈಲೇಂದ್ರ, ಪ್ರದೀಪ್, ದಲ್ಲಾರಾಮ್, ಜಿತೇಂದ್ರ, ಶಂಕರ್ ಪಾಟೀಲ್ ಹಾಗೂ ದಿನೇಶ್ ಬಂಧಿತರು.

ಮೊದಲ ಗಂಡ ಮೋಹನ್‌ ರಾಮ್‌ ಜತೆ ಮಂಜುಳಾ

ರಾಜಸ್ಥಾನ ಮೂಲದ ಮೋಹನ್‍ರಾಮ್ ಎಂಬಾತ ಜಿಲ್ಲೆಯ ಕಡೂರಿನಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ವರ್ಷದ ಹಿಂದೆ ಜೋಧಪುರ ಮೂಲದ ಮಂಜುಳಾ ಎಂಬಾಕೆಯನ್ನು ಮದುವೆಯಾಗಿದ್ದ. ಪತಿ ಜತೆ ಕಡೂರಿಗೆ ಬಂದಿದ್ದ ಮಂಜುಳಾ ಎರಡು ತಿಂಗಳ ಬಳಿಕ ಊರಿಗೆ ಹೋದವಳು ವಾಪಸ್ ಬರಲೇ ಇಲ್ಲ. ಹೀಗಾಗಿ ರಾಜಸ್ಥಾನಕ್ಕೆ ಹೋದ ಮೋಹನ್‍ರಾಮ್ ಕೂಡ ಬರಿಗೈಲಿ ವಾಪಸ್ಸಾಗಿದ್ದ. ಹೆಂಡತಿ ಮೇಲಿನ ಪ್ರೀತಿಯಿಂದ ಆಗಾಗ್ಗೇ ಮೆಸೇಜ್ ಕೂಡ ಮಾಡುತ್ತಿದ್ದ. ಆದರೆ, ಅಷ್ಟರಲ್ಲಾಗಲೇ ಮಂಜುಳಾಗೆ ಹರಿಯಾಣದ ಪಿಪ್ಲಿವಾಲ ಗ್ರಾಮದ ಓಂಪ್ರಕಾಶ್ ಎಂಬಾತದ ಜತೆ ಏರಡನೇ ಮದುವೆಯಾಗಿತ್ತು.

ಇದನ್ನೂ ಓದಿ | ಅಂಕೋಲಾದಲ್ಲಿ ಇಬ್ಬರು ಅಂತಾರಾಜ್ಯ ಮೊಬೈಲ್‌ ಕಳ್ಳರ ಬಂಧನ

ಹೆಂಡತಿಯ ಮೊದಲ ಗಂಡ ಮೋಹನ್‌ರಾಮ್‌ ಮೆಸೇಜ್ ನೋಡಿ ಎರಡನೇ ಗಂಡ ಓಂಪ್ರಕಾಶ್‌ ಕ್ರೋಧಗೊಂಡಿದ್ದ. ಹೀಗಾಗಿ ಮೊದಲ ಗಂಡನನ್ನು ಹೇಗಾದರೂ ಮಾಡಿ ಕೊಲ್ಲಲು ಬೆಂಗಳೂರಿನ ಏಳು ಜನ ಸ್ನೇಹಿತರೊಂದಿಗೆ ಕಿರಾಣಿ ಅಂಗಡಿಯಲ್ಲಿದ್ದ ಮೋಹನ್‍ನನ್ನು ಆಗಸ್ಟ್ 28ರಂದು ಕಿಡ್ನ್ಯಾಪ್ ಮಾಡಿ ಕೊಂಡೊಯ್ಯುವಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಕಡೂರು ಪೊಲೀಸರು ಹಂತಕರ ಗಾಡಿಯನ್ನು ಬೆನ್ನಟ್ಟಿದ್ದಾರೆ. ವಾಹನ ಕಡೂರಿನ ಮತಿಘಟ್ಟ ಗ್ರಾಮಕ್ಕೆ ತೆರಳುತ್ತಿದ್ದಂತೆ ಕೆಟ್ಟು ನಿಂತ ಪರಿಣಾಮ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಪಹರಣಕ್ಕೊಳಗಾದ ಮೋಹನ್‌ರಾಮ್‌ನನ್ನು ಬಿಡಿಸಿದ್ದಾರೆ.

ಆರೋಪಿಗಳು ಭಾನುವಾರ ಕಡೂರಿನ ಸಿಪಿಸಿ ಕಾಲನಿಯಲ್ಲಿನ ದಿನಸಿ ಅಂಗಡಿಯಲ್ಲಿದ್ದ ಮೋಹನ್ ರಾಮ್‍ನನ್ನು ಸಿನಿಮಿಯ ಶೈಲಿಯಲ್ಲಿ ಅಪಹರಿಸಿದ್ದರು. ಆತನ ಬಾಯಿಗೆ ಬಟ್ಟೆ ಕಟ್ಟಿ, ಕಾರಿನಲ್ಲಿಯೇ ಕೊಲೆಗೆ ಸಂಚು ನಡೆಸಿದ್ದರು. ಆದರೆ, ಅಪಹರಣದ ದೃಶ್ಯವನ್ನು ಸ್ಥಳೀಯರು ಗಮನಿಸಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿನಿಮೀಯ ರೀತಿ ಗಾಡಿಯನ್ನು ಚೇಸ್ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನ| ತೀರ್ಪು ಪಾಲಿಸುತ್ತೇವೆ ಎಂದ ಸಚಿವ ಅಶೋಕ್‌, ಮಾಹಿತಿ ಪಡೆದ ಸಿಎಂ

Exit mobile version