ಶಿವಮೊಗ್ಗ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬರು (Liqour tragedy) ಕಳೆ ನಾಶಕ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಸಾಗರ ತಾಲೂಕಿನ ತ್ಯಾಗರ್ತಿ ಕಾಗೋಡುದಿಂಬದ ಮಳ್ಳ ಗ್ರಾಮದ ಬಂಗಾರಪ್ಪ(58) ಮೃತಪಟ್ಟವರು.
ಡಿ..5ರಂದು ಇವರು ಗದ್ದೆಗೆ ಹೋಗಿದ್ದರು. ಅಲ್ಲಿ ಮದ್ಯ ಸೇವಿಸಿದ ಅವರು ಅದೇ ಅಮಲಿನಲ್ಲಿ ಮದ್ಯದ ಬಾಟಲಿ ಬದಲು ಕೀಟನಾಶಕ ಸೇವನೆ ಮಾಡಿದ್ದರು ಎನ್ನಲಾಗಿದೆ. ಗದ್ದೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ ಅವರನ್ನು ಸಾಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮೆಗ್ಗಾನ್ ಅಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಕೊನೆಯುಸಿರೆಳೆದರು.
ಪುತ್ರಿ ಹೇಮಾ ಅವರು ನೀಡಿದ ದೂರಿನ ಆಧಾರದಲ್ಲಿ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ತಂತಿ ತಗುಲಿ ರೈತ ಸಾವು
ಹೊಸನಗರ ತಾಲೂಕಿನ ಹರತಾಳು ಗ್ರಾಪಂ ವ್ಯಾಪ್ತಿಯ ನಂಜವಳ್ಳಿ ಗ್ರಾಮದ ಶೇಷಗಿರಿ ಎಂಬ ರೈತರು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಇಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ಉರುಳಿ ಬಿದ್ದಿತ್ತು. ತುಂಡಾಗಿ ಬಿದ್ದಿದ್ದನ್ನು ತಿಳಿಯದೆ ಶೇಷಗಿರಿ ವಿದ್ಯುತ್ ತಂತಿ ಸ್ಪರ್ಶಿಸಿದ್ದರು. ಮೂಲತಃ ರಿಪ್ಪನಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾಗಿರುವ ಶೇಷಗಿರಿ ಅವರು ನಂಜವಳ್ಳಿಯಲ್ಲಿ ಜಮೀನು ಖರೀದಿಸಿ ವಾಸವಾಗಿದ್ದರು. ರಿಪ್ಪನಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Child death | ನೀರು ತುಂಬಿದ ಬಕೆಟ್‌ನೊಳಗೆ ಬಿದ್ದು 10 ತಿಂಗಳ ಮಗು ಸಾವು, ಆಟವಾಡುತ್ತಿದ್ದಾಗ ಸಂಭವಿಸಿತು ದುರಂತ