Site icon Vistara News

ತುಂಬಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ನೀರುಪಾಲು

kagina river
ನೀರಿಗೆ ಬಿದ್ದ ಮೀನುಗಾರನಿಗೆ ಹುಡುಕಾಟ

ಕಲಬುರಗಿ: ಭಾರಿ ಮಳೆ ಮತ್ತು ಅಣೆಕಟ್ಟುಗಳಿಂದ ಬಿಟ್ಟ ನೀರಿನಿಂದ ನದಿಗಳು ತುಂಬಿ ಹರಿಯುತ್ತಿದ್ದರೂ ಕೆಲವು ಕಡೆ ಜನರು ತಮ್ಮ ದುಸ್ಸಾಹಸ ಮಾಡುವುದನ್ನು ನಿಲ್ಲಿಸುವುದಿಲ್ಲ ಎನ್ನುವುದಕ್ಕೆ ಕಾಗಿಣಾ ನದಿಯಲ್ಲಿ ನಡೆದ ಘಟನೆ ಒಂದು ಉದಾಹರಣೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಹರಿಯುವ ಕಾಗಿಣಾ ನದಿಯಲ್ಲಿ ಭಾರಿ ನೀರು ಹರಿಯುತ್ತಿದೆ. ಅಲ್ಲಿ ಮೀನು ಹಿಡಿಯುವ ದುಸ್ಸಾಹಸ ಮಾಡಿದ ವ್ಯಕ್ತಿಯೊಬ್ಬರು ಈಗ ನೀರುಪಾಲಾಗಿದ್ದಾರೆ. ಶೇಖ್‌ ಅಹ್ಮದ್‌ ಎಂಬವರು ಸೇತುವೆ ಮೇಲೆ ಕುಳಿತು ನದಿಯಲ್ಲಿ ಬಲೆ ಬೀಸುತ್ತಿದ್ದರು. ಈ ವೇಳೆ ಆಯತಪ್ಪಿ ಅವರು ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದ್ದಾರೆ.

ಇವರು ಚಿತ್ತಾಪುರ ಪಟ್ಟಣದ ನಿವಾಸಿಯಾಗಿದ್ದು, ಎಲ್ಲರ ಕಣ್ಣೆದುರೇ ಕೊಚ್ಚಿಕೊಂಡು ಹೋದರು. ಕೂಡಲೇ ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್‌ ತಂಡ ಆಗಮಿಸಿ ಉಕ್ಕಿ ಹರಿಯುವ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ| Heavy Rain | ಸಾತ್ಕೊಳದಲ್ಲಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಕಾರು, ವ್ಯಕ್ತಿ ನೀರು ಪಾಲು

Exit mobile version