Site icon Vistara News

Drowned in river : ಯುಗಾದಿ ಪುಣ್ಯ ಸ್ನಾನ ಮಾಡಲು ಬಂದ ವ್ಯಕ್ತಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಸಾವು

death at triveni sangam

#image_title

ಮೈಸೂರು: ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮಕ್ಕೆ ಯುಗಾದಿ ಪುಣ್ಯಸ್ನಾನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ (Drowned in river) ಮೃತಪಟ್ಟಿದ್ದಾರೆ.

ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದ ಗಂಗಾಧರ್ ಮೃತ ದುರ್ದೈವಿ. ಮೈಸೂರಿನ ಎಸ್‌ಬಿಐ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಅವರು ಪ್ರಸ್ತುತ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ವಾಸವಿದ್ದಾರೆ.

ಗಂಗಾಧರ್ ತಮ್ಮ ಮನೆಯವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಆಗಮಿಸಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ನೀರಿನಲ್ಲಿ ಮುಳುಗಿದ ಅವರನ್ನು ರಕ್ಷಿಸಲು ಸ್ಥಳದಲ್ಲಿದ್ದವರು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.

ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದ್ದು, ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ಕಂಟೇನರ್‌ ಲಾರಿ

ಆನೇಕಲ್: ದಾಮಿಗೆ ಟಯರ್‌ಗಳನ್ನು ಸಾಗಿಸುತ್ತಿದ್ದ ಕಂಟೇನರ್‌ ಲಾರಿಯೊಂದಕ್ಕೆ ವಿದ್ಯುತ್‌ ತಂತಿ ಸ್ಪರ್ಶವಾಗಿ ವಾಹನವೇ ಹೊತ್ತಿ ಉರಿದಿದೆ. ಕಂಟೇನರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದ ವಡೇರ ಮಂಚನಹಳ್ಳಿ ಬಳಿ ಘಟನೆ ನಡೆದಿದೆ.

ಎಮ್ ಆರ್ ಎಫ್ ಕಂಪನಿಯಲ್ಲಿ ತಯಾರಾದ ಟೈರ್‌ಗಳನ್ನು ಗೋದಾಮಿಗೆ ಸಾಗಿಸಲಾಗುತ್ತಿತ್ತು. ಲಾರಿ ಜಿಗಣಿ ಕೈಗಾರಿಕಾರ ಪ್ರದೇಶದ ವಡೇರ ಮಂಚನಹಳ್ಳಿಯನ್ನು ತಲುಪಿದಾಗ 11 ಕೆವಿ ವಿದ್ಯುತ್ ತಂತಿ ಕಂಟೇನರ್ ಲಾರಿಗೆ ತಗುಲಿದೆ.

ಹೊತ್ತಿ ಉರಿದ ಲಾರಿ ಮತ್ತು ಮೃತಪಟ್ಟ ಚಾಲಕ ರಾಜೇಂದ್ರನ್‌

ಒಮ್ಮೆಗೇ ಬೆಂಕಿ ಹತ್ತಿಕೊಂಡಿದ್ದು ಕ್ಷಣಾರ್ಧದಲ್ಲಿ ಲಾರಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರಾದರೂ ಅಷ್ಟು ಹೊತ್ತಿಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಜತೆಗೆ ಅದರೊಳಗಿದ್ದ ಚಾಲಕ ರಾಜೇಂದ್ರನ್‌ ಅವರು ಹೊರಕ್ಕೆ ಬರಲಾಗದೆ ಸುಟ್ಟು ಕರಕಲಾಗಿದ್ದಾರೆ. ಮೃತಪಟ್ಟ ಚಾಲಕ ರಾಜೇಂದ್ರನ್‌ ಅವರು, ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ಕಂದಿಗೈ ಗ್ರಾಮದವರು ಎಂದು ತಿಳಿದುಬಂದಿದೆ.‌

ಮದ್ಯ ಸಾಗಿಸುತ್ತಿದ್ದ ಲಾರಿಗೆ ಅದಿರು ಸಾಗಾಟದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯುವಶ

ಕಾರವಾರ: ಮದ್ಯ ಸಾಗಿಸುತ್ತಿದ್ದ ಲಾರಿಗೆ ಅದಿರು ಸಾಗಾಟದ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ (Road accident) ಅದಿರು ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ತೋಡೂರು ಗ್ರಾಮದ ಬಳಿ ನಡೆದಿದೆ.

ಬುಧವಾರ ಮುಂಜಾನೆ ನಡೆದ ಅಪಘಾತದಲ್ಲಿ ಮೃತಪಟ್ಟ ಚಾಲಕನನ್ನು ರೂಪೇಶ ಪಾಟೀಲ್(23) ಎಂದು ಗುರುತಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ನಿವಾಸಿ.

ಎರಡೂ ಲಾರಿಗಳು ಗೋವಾದಿಂದ ಅಂಕೋಲಾದತ್ತ ತೆರಳುತ್ತಿದ್ದವು. ಮದ್ಯ ತುಂಬಿದ ಲಾರಿ ಮುಂದಿನಿಂದ ಸಾಗುತ್ತಿದ್ದರೆ, ಅದಿರು ಲಾರಿ ಹಿಂದಿನಿಂದ ಸಾಗುತ್ತಿತ್ತು. ಬೆಳಗಿನ ಜಾವ ನಿದ್ದೆ ಮಂಪರಿನಲ್ಲಿ ಮುಂಬದಿ ತೆರಳುತ್ತಿದ್ದ ಮದ್ಯ ಸಾಗಾಟ ಲಾರಿಗೆ ಅದಿರು ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಮದ್ಯ ಸಾಗಾಟದ ಲಾರಿ ನುಜ್ಜುಗುಜ್ಜಾಗಿದೆ. ಮದ್ಯದ ಬಾಕ್ಸ್‌ಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ನಡುವೆ, ಲಾರಿಯ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಚಾಲಕ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Chemical leakage : ರಾಸಾಯನಿಕ ತುಂಬಿದ ಟ್ಯಾಂಕರ್‌ ಪಲ್ಟಿ, ಅನಿಲ ಸೋರಿಕೆಯಿಂದ ಹೆದ್ದಾರಿ ಸಂಚಾರ ಬಂದ್‌

Exit mobile version