Site icon Vistara News

Pocso Case : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಸಂಬಂಧಿ ಅರೆಸ್ಟ್‌

Harrassment

#image_title

ಮಡಿಕೇರಿ: ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ (Pocso Case) ನಡೆಸಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಇಗ್ಗೋಡ್ಲು ಗ್ರಾಮದ ಕೂಲಿ ಕಾರ್ಮಿಕ ಪಾಪಣ್ಣ ಅಲಿಯಾಸ್‌ ಸುಬ್ಬಯ್ಯ (45) ಎಂಬಾತನೇ ಆರೋಪಿ.

ನಿಜವೆಂದರೆ, ಪಾಪಣ್ಣ ಈ ಬಾಲಕಿಯ ದೂರದ ಸಂಬಂಧಿಯೇ ಆಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿ ಹೋಗಿದ್ದ ಪಾಪಣ್ಣ, ಬಾಲಕಿಯನ್ನು ಕುರಿತು ʻನಿನ್ನ ತಂದೆ ಇಲ್ಲವೇʼ ಎಂದು ಕೇಳಿದ್ದಾನೆ. ಆಗ ಬಾಲಕಿ, ʻಮನೆಯಲ್ಲಿ ಯಾರೂ ಇಲ್ಲ, ನೀವು ಹೊರಡಿʼ ಎಂದು ತಿಳಿಸಿ ಬಾಗಿಲು ಹಾಕಿಕೊಂಡಿದ್ದಾಳೆ.

ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದು ಬಾಲಕಿ ಹೊರಬಂದಿದ್ದಾಳೆ. ಈ ಸಂದರ್ಭ ಮನೆಯ ಪಕ್ಕದಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಪಾಪಣ್ಣ ಮನೆಯೊಳಗೆ ತೆರಳಿದ್ದು, ಬಾಲಕಿ ವಾಪಸ್ ಮನೆಯೊಳಗೆ ಬಂದ ಸಂದರ್ಭ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಘಟನೆಯ ಬಗ್ಗೆ ಬಾಲಕಿ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ರಾಮಚಂದ್ರ‌ ನಾಯಕ್, ಠಾಣಾಧಿಕಾರಿ ರಮೇಶ್ ಕುಮಾರ್ ಅವರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆರೋಪಿ ಪಾಪಣ್ಣನಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ : Sexual harrassment : ಲೆಕ್ಚರರ್‌ನಿಂದ ಲೈಂಗಿಕ ಕಿರುಕುಳ; ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು, ಅತ್ಯಾಚಾರ ಎಸಗಿ ಕೊಲೆ ಆರೋಪ

Exit mobile version