Site icon Vistara News

Man in Burqa | ರಸ್ತೆಯಲ್ಲಿ ಹೆಣ್ಣು ಮಕ್ಕಳ ಕೈಹಿಡಿದು ಎಳೆಯುತ್ತಿದ್ದ ಬುರ್ಖಾಧಾರಿ ಯುವಕ; ಸ್ಥಳೀಯರಿಂದ ಧರ್ಮದೇಟು

davanagere burqa

ದಾವಣಗೆರೆ: ಇಲ್ಲೊಬ್ಬ ವಿಕೃತ ಕಾಮಿಯೊಬ್ಬ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ಹಾಕಿಕೊಂಡು (Man in Burqa) ಕಂಡ ಕಂಡ ಹೆಣ್ಣು ಮಕ್ಕಳ ಕೈ ಹಿಡಿದು ಎಳೆಯುತ್ತಿದ್ದವನ ಮೇಲೆ ಅನುಮಾನಗೊಂಡು ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ. ಬಳಿಕ ಆತನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈತ ದಾವಣಗೆರೆ ನಗರದ ಹೊರವಲಯದ ಕಲ್ಪನಹಳ್ಳ ನಿವಾಸಿ ಎನ್ನಲಾಗಿದೆ. ಆದರೆ, ಈತನ ನಿಜ ಹೆಸರು ತಿಳಿದುಬಂದಿಲ್ಲ. ಈ ಯುವಕ ಆಜಾದ್‌ ನಗರ, ಭಾಷಾ ನಗರದಲ್ಲಿ ಬುರ್ಖಾ ಹಾಕಿಕೊಂಡು ಸುತ್ತಾಡುತ್ತಿದ್ದ. ರಸ್ತೆಯಲ್ಲಿ ಓಡಾಡುತ್ತಿದ್ದ ಹೆಣ್ಣುಮಕ್ಕಳ ಕೈ ಹಿಡಿದು ಎಳೆಯುತ್ತಿದ್ದ. ಇದು ಹೆಣ್ಣು ಮಕ್ಕಳಿಗೂ ಇರಿಸು ಮುರಿಸನ್ನು ಉಂಟುಮಾಡಿತ್ತು.

ಸ್ಥಳೀಯರಿಗೆ ಮೂಡಿದ ಅನುಮಾನ
ಬುರ್ಖಾಧಾರಿಯ ಅವತಾರವನ್ನು ಗಮನಿಸುತ್ತಿದ್ದ ಸ್ಥಳೀಯರಿಗೆ ಈತನ ನಡೆ ಮೇಲೆ ಬಹಳವೇ ಅನುಮಾನ ಮೂಡಿದೆ. ಬುರ್ಖಾ ಹಾಕಿಕೊಂಡು ಸುಮ್ಮನೆ ಹೋಗುವುದು ಬಿಟ್ಟು ಏಕೆ ಹೀಗೆ ಕಂಡ ಕಂಡ ಹೆಣ್ಣು ಮಕ್ಕಳ ಕೈ ಹಿಡಿದು ಎಳೆಯುತ್ತಿರುವುದು ಏಕೆ ಎಂಬ ಶಂಕೆ ಮೂಡಿದ್ದರಿಂದ ಅಡ್ಡಗಟ್ಟಿ ವಿಚಾರಿಸಿದ್ದಾರೆ. ಆಗ ಧ್ವನಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಗ ಬುರ್ಖಾವನ್ನು ತೆಗೆಸಿದ್ದು, ಯುವಕನೊಬ್ಬ ಹೀಗೆ ಮಾಡುತ್ತಿರುವುದು ಗೊತ್ತಾಗಿದೆ. “ಯಾಕೆ ಹೀಗೆ ಮಾಡುತ್ತಿದ್ದೀಯ” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಆಗ, “ತಾನು ಇದನ್ನು ಗೊಂಬೆಗೆ ಹಾಕಲು ತಂದಿದ್ದು, ಸುಮ್ಮನೆ ಹಾಕಿ ನೋಡಿದ್ದೇನೆ. ನನ್ನಿಂದ ತಪ್ಪಾಯಿತು, ಕ್ಷಮಿಸಿಬಿಡಿ” ಎಂದು ಕೇಳಿಕೊಂಡಿದ್ದಾನೆ. ಈ ವೇಳೆ ಮೊಬೈಲ್‌ನಲ್ಲಿ ಸ್ಥಳೀಯರು ಚಿತ್ರೀಕರಣ ಮಾಡಿಕೊಂಡಿದ್ದು, ಮೊಬೈಲ್‌ ಕಿತ್ತುಕೊಳ್ಳಲು ಆ ಯುವಕ ಮುಂದಾಗಿದ್ದಾನೆ. ಇದು ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ | Sexual Harrassment| 13 ವರ್ಷದ ಬಾಲಕಿಯ 25 ವಾರಗಳ ಗರ್ಭಪಾತಕ್ಕೆ ಹೈಕೋರ್ಟ್‌ ಅನುಮತಿ, ಭ್ರೂಣ ಸಂರಕ್ಷಣೆಗೆ ಸೂಚನೆ

ಯುವಕನ ಈ ಕೃತ್ಯಕ್ಕೆ ರೊಚ್ಚಿಗೆದ್ದ ಸ್ಥಳೀಯರು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆಜಾದ್ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಇದು ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟ ಪ್ರಕರಣವಾಗಿದ್ದರಿಂದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಆರೋಪಿ ಯುವಕ ಮಹಿಳಾ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದಾನೆ.

ಈತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈತ ಎಷ್ಟು ದಿನದಿಂದ ಈ ಕೃತ್ಯ ನಡೆಸುತ್ತಿದ್ದಾನೆ? ಎಲ್ಲೆಲ್ಲಿ ಹೀಗೆ ಮಾಡಿದ್ದಾನೆ? ಕೈ ಹಿಡಿದು ಎಳೆಯುವಷ್ಟಕ್ಕೇ ಸೀಮಿತವಾಗಿದ್ದನೇ? ಅಥವಾ ಇನ್ನೂ ಬೇರೆ ರೀತಿಯಲ್ಲಿ ಕಿರುಕುಳ ನೀಡಿದ್ದಾನೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Sexual Assault | ಕಸ ಗುಡಿಸಲು ಹೆಣ್ಣು ಮಕ್ಕಳ ಕರೆಸುತ್ತಾನೆ, ಎಲ್ಲೆಲ್ಲೋ ಮುಟ್ಟುತ್ತಾನೆ; ಮುಖ್ಯ ಶಿಕ್ಷಕನಿಗೆ ಗೂಸಾ

Exit mobile version