Site icon Vistara News

Suicide Case: ಬಲೂನ್‌ ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂರ್ತೆದಾರರ ಮುಖಂಡ

Man jumps into kumaradhara river tying balloons

Man jumps into kumaradhara river tying balloons

ಮಂಗಳೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದ ರೈತರೊಬ್ಬರು ಕುಮಾರಧಾರಾ ನದಿಗೆ ಹಾರಿ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. ಅವರು ನದಿಗೆ ಹಾರುವಾಗ ಬಲೂನು ಕಟ್ಟಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಘಟನೆ ನಡೆದಿದ್ದು, ಆಲಂಕಾರು ನಿವಾಸಿ ಚಂದ್ರಶೇಖರ (60) ಆತ್ಮಹತ್ಯೆ ಮಾಡಿಕೊಂಡವರು.

ಅವರು ಶುಕ್ರವಾರ ಬೆಳಗ್ಗೆ ಶಾಂತಿಮೊಗರು ಸೇತುವೆಯಿಂದ ಕುಮಾರಧಾರಾ ನದಿಗೆ (Kumaradhara River) ಹಾರಿದ್ದಾರೆ. ಅವರು ಎರಡು ಬಲೂನುಗಳನ್ನು ಕಟ್ಟಿಕೊಂಡು ನದಿಗೆ ಜಿಗಿದಿದ್ದಾರೆ. ನೀರಿಗೆ ಜಿಗಿದ ಅವರು ಅಲ್ಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ, ಬಲೂನು ಕಟ್ಟಿಕೊಂಡಿದ್ದ ಕಾರಣ ಅವರ ಶವವನ್ನು ಪತ್ತೆ ಹಚ್ಚಲು ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಅಗ್ನಿಶಾಮಕ ಸಿಬ್ಬಂದಿ ನದಿಗೆ ಇಳಿದು ಶವವನ್ನು ಮೇಲಕ್ಕೆ ಎತ್ತಿದ್ದಾರೆ.

ಕುಮಾರಧಾರಾ ನದಿಯ ಪರಿಸರದಲ್ಲಿ ಸೇರಿದ ಜನರು

ಚಂದ್ರಶೇಖರ ಅವರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ʻʻನನ್ನ ಸಾವಿಗೆ ನಾನೇ ಕಾರಣʼ ಎಂದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟೇ ಅವರು ಸೇತುಗೆ ಬಳಿಗೆ ಹೋಗಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ.

ಐಪಿಎಲ್‌ ಬೆಟ್ಟಿಂಗ್‌ ದಂಧೆಗೆ ಯುವಕ ಬಲಿ, ಹಣ ಕೇಳಲು ಹೋದಾಗ ಕೊಲೆ

ಮಂಡ್ಯ: ಕಳೆದ ಕೆಲವು ತಿಂಗಳುಗಳಿಂದ ಜನರಲ್ಲಿ ಭಾರಿ ಆಸಕ್ತಿ ಮೂಡಿಸಿರುವ ಐಪಿಎಲ್ ಕ್ರಿಕೆಟ್‌ (IPL Cricket) ಸೀಸನ್‌ಗೆ ಕ್ರೀಡಾಸಕ್ತಿ ಮುಖ ಒಂದೆಡೆಯಾದರೆ ಇನ್ನೊಂದು ಕಡೆ ಅದು ಬೆಟ್ಟಿಂಗ್‌ ದಂಧೆಯ (IPL Betting) ಕರಾಳತೆಯನ್ನೂ ಹೊಂದಿರುವುದು ಹಲವು ಬಾರಿ ಬಯಲಾಗಿದೆ. ಆದರೆ, ಸಾಮಾನ್ಯವಾಗಿ ಇದು ಕೆಲವರಿಗೆ ಲಾಭ ಮತ್ತು ಹಲವರಿಗೆ ನಷ್ಟ ಉಂಟುಮಾಡಿರುವುದು ನಿಜ. ಆದರೆ, ಈ ಬೆಟ್ಟಿಂಗ್‌ ದಂಧೆ ಒಬ್ಬ ಯುವಕನ ಪ್ರಾಣವನ್ನೇ ಕಸಿದಿದೆ.

ಐಪಿಎಲ್ ಬೆಟ್ಟಿಂಗ್ ದಂಧೆಗೆ ಯುವಕನ ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ. ಸಿ.ಎ.ಕೆರೆ ಗ್ರಾಮದ ಪುನೀತ್ ಕೊಲೆಯಾದ ದುರ್ದೈವಿ.

ಪುನೀತ್‌ ಮತ್ತು ಇತರ ಕೆಲವು ಯುವಕರು ಈ ಸೀಸನ್‌ನ ಆರಂಭದಿಂದಲೂ ಯಾವ ತಂಡ ಗೆಲ್ಲುತ್ತದೆ, ಸೋಲುತ್ತದೆ ಮತ್ತಿತರ ಅಂಶಗಳನ್ನು ಆಧರಿಸಿ ಬೆಟ್ಟಿಂಗ್‌ ಕಟ್ಟುತ್ತಿದ್ದರು. ಪ್ಲೇ ಆಫ್‌ ಪ್ರವೇಶಿಸುವ ತಂಡಗಳು ಯಾವುದು ಎನ್ನುವುದೂ ಸೇರಿದಂತೆ ಹಲವು ಆಸಕ್ತಿಕರ ವಿಚಾರಗಳಲ್ಲಿ ಬೆಟ್ಟಿಂಗ್‌ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಈ ನಡುವೆ, ಪುನೀತ್‌ ಬೆಟ್ಟಿಂಗ್‌ನಲ್ಲಿ ಒಂದು ಹಂತದಲ್ಲಿ ಗೆದ್ದಿದ್ದ. ಇದರ ಹಣವನ್ನು ಕೊಡುವಂತೆ ಕೇಳಿದಾಗ ತಾವಿದ್ದಲ್ಲಿಗೆ ಬರುವಂತೆ ಇನ್ನೊಂದು ತಂಡ ಹೇಳಿತ್ತು. ಹೀಗೆ ಬೆಟ್ಟಿಂಗ್ ಹಣ ಪಡೆಯುಲು ಹೋಗಿದ್ದ ವೇಳೆ ಪುನೀತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಪುನೀತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿಗಳು ಆತನಿಗೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case: ಅನೈತಿಕ ಸಂಬಂಧಕ್ಕೆ ಹಾರಿಹೋದ ಪ್ರಾಣಪಕ್ಷಿ; ಚೈಲ್ಡ್‌ ಎಂದು ಕರೆದವನ ಮೇಲೆ ಮಾರಣಾಂತಿಕ ಹಲ್ಲೆ

Exit mobile version