Site icon Vistara News

Murder Case : ಪತ್ನಿಯನ್ನು ಕೊಂದು ಫೇಸ್‌ಬುಕ್ ಸ್ಟೇಟಸ್‌ ಹಾಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ!

murder muniraju

#image_title

ಚಾಮರಾಜನಗರ:‌ ವ್ಯಕ್ತಯೊಬ್ಬ ಪತ್ನಿಯನ್ನು ಕೊಲೆ ಮಾಡಿ (Murder Case), ಆಕೆ ಸಾಯುತ್ತಿರುವ ಕೊನೆಯ ಕ್ಷಣಗಳನ್ನು ಫೇಸ್‌ ಬುಕ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡು ಬಳಿಕ ತಾನೂ ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ನಡೆದಿರುವುದು ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಎರಭಯ್ಯನಹಳ್ಳಿಯ ಮುನಿರಾಜು ಎಂಬಾತನೇ ಪತ್ನಿ ಲಕ್ಷ್ಮಿಯನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡ ಧೂರ್ತ.

ಮುನಿರಾಜು ಮತ್ತು ಲಕ್ಷ್ಮಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಮುನಿರಾಜುವಿನ ಕಾಟ, ಹಿಂಸೆ ತಾಳಲಾರದೆ ಆಕೆ ಆತನನ್ನು ತೊರೆದಿದ್ದಳು. ಬಳಿಕ ಬೇರೊಬ್ಬ ವ್ಯಕ್ತಿಯ ಜತೆ ನಾಗಮಲೆಗೆ ಬಂದು ವಾಸವಾಗಿದ್ದಳು. ಮುನಿರಾಜುವಿನ ಕಿರಿಕಿರಿ ತಪ್ಪಿತೆಂದು ಸ್ವಲ್ಪ ನೆಮ್ಮದಿಯಲ್ಲಿದ್ದಳು.

ಈ ನಡುವೆ ತನ್ನನ್ನು ತೊರೆದ ಲಕ್ಷ್ಮಿ ನಾಗಮಲೆಯಲ್ಲಿ ಯಾರೊಂದಿಗೋ ಸುಖವಾಗಿದ್ದಾಳೆಂಬ ವಿಷಯ ಆತನಿಗೆ ತಿಳಿಯಿತು. ಅದನ್ನು ಸಹಿಸಿಕೊಳ್ಳಲಾಗದ ಆತ ಧರ್ಮಪುರಿಯಿಂದ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ. ಅಲ್ಲಿ ಲಕ್ಷ್ಮಿಯ ಮನೆಯನ್ನು ಪತ್ತೆ ಹಚ್ಚಿ ಆಕೆಯ ಜತೆ ಜಗಳವಾಡಿ ಅಂತಿಮವಾಗಿ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಲಕ್ಷ್ಮಿಯನ್ನು ಕೊಂದ ಈ ಧೂರ್ತ ರಕ್ತ ಸಿಕ್ತ ದೇಹದ ವಿಡಿಯೊ ಮಾಡಿ ಅದನ್ನು ಫೇಸ್‌ ಬುಕ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ನೀನು ನನಗೆ ಬೇಕು, ನಾನೂ ನಿನ್ನೊಂದಿಗೆ ಬರುತ್ತೇನೆ ಎಂದೆಲ್ಲ ಹುಚ್ಚನಂತೆ ಅರಚುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಬಳಿಕ ಮುನಿರಾಜು ಅಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.

ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : Triple Murder: ಪತ್ನಿಯ ಅಕ್ರಮ ಸಂಬಂಧ, ಪತ್ನಿ ಸೇರಿ ಇಬ್ಬರು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ತಂದೆ

Exit mobile version