ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಮಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಗೆ ಪ್ಲಾಸ್ಕ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ (Murder Case) ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿ ಬಳಿಕ ಶವವನ್ನು ಸ್ಥಳಾಂತರ ಮಾಡಲು ಹೋಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ನೇಪಾಳ ಮೂಲದ ತೇಜೇಶ್ವರ್ ಹತ್ಯೆಯಾದವ. ಧರ್ಮೇಂದ್ರ ಸಿಂಗ್ ಕೊಲೆಗೈದ ಆರೋಪಿ. ಇಬ್ಬರೂ ದಿನ್ನೂರು ಸಿಗೇಹಳ್ಳಿಯ ನೇಪಾಳಿ ಕಾಲೋನಿ ನಿವಾಸಿಗಳಾಗಿದ್ದಾರೆ. ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ತೇಜೇಶ್ವರ್ ಅತಿಯಾದ ಕುಡಿತದ ಚಟವನ್ನು ಮೈ ಗೂಡಿಸಿಕೊಂಡಿದ್ದ. ಕುಡಿತದ ಹಿನ್ನೆಲೆ 2 ತಿಂಗಳ ಹಿಂದೆ ಕೆಲಸದಿಂದ ಹೋಟೆಲ್ ಮಾಲೀಕ ಕಿತ್ತು ಹಾಕಿದ್ದ. ಹೀಗಾಗಿ ಮೂವರು ನೇಪಾಳಿಗಳನ್ನು ಕರೆದುಕೊಂಡು ತೇಜೇಶ್ವರ್ ಬಾರ್‌ಗೆ ಹೋಗಿದ್ದ. ಈ ವೇಳೆ ತೇಜೇಶ್ವರ್ ಹಾಗೂ ಧರ್ಮೇಂದ್ರ ಸಿಂಗ್ ನಡುವೆ ಗಲಾಟೆಯಾಗಿದೆ.
ಈ ಗಲಾಟೆ ಧರ್ಮೇಂದ್ರ ಮನೆಯವರೆಗೂ ತಲುಪಿತ್ತು. ಕುಡಿತ ಮತ್ತಿನಲ್ಲಿ ಮನೆಗೆ ಬಂದು ಗಲಾಟೆ ಮಾಡಿ ತನ್ನ ಮಗಳನ್ನು ಬೈದ ಎಂದು ಪ್ಲಾಸ್ಕ್‌ನಿಂದ ಬಡಿದು ಧರ್ಮೇಂದ್ರ ಸಿಂಗ್ ಕೊಂದಿದ್ದಾನೆ. ನಂತರ ಸಂಜೆಯವರೆಗೆ ಮನೆಯಲ್ಲೆ ಮೃತದೇಹವನ್ನು ಧರ್ಮೇಂದ್ರ ಇಟ್ಟುಕೊಂಡಿದ್ದ.
ಇದನ್ನೂ ಓದಿ | Road Accident: ಮಡಿಕೇರಿಯಲ್ಲಿ ಲಾರಿ-ಬೈಕ್ ಡಿಕ್ಕಿಯಾಗಿ ವೈದ್ಯಕೀಯ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ
ನಂತರ ಮತ್ತೊಬ್ಬನಿಗೆ ಹಣ ಕೊಡುತ್ತೇನೆ, ಮೃತದೇಹ ಎಸೆದು ಬರುವಂತೆ ತಿಳಿಸಿದ್ದ. ಕರೆ ಸ್ವೀಕರಿಸಿದವನು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದ. ಹೀಗಾಗಿ ಸ್ಥಳಕ್ಕೆ ಕಾಡುಗೋಡಿ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಸಾವು
ಧಾರವಾಡ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ. ಹುಚ್ಚೇಶ ಹಿರೇಗೌಡರ (37) ಮೃತ ಕ್ಯಾನ್ಸ್‌ಟೇಬಲ್. ಇದೇ ವೇಳೆ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳಾ ಕಾನ್ಸ್‌ಟೇಬಲ್‌ಗೆ ಗಂಭೀರ ಗಾಯಗಳಾಗಿವೆ. ಛಬ್ಬಿ ಗಣೇಶೋತ್ಸವ ಬಂದೋಬಸ್ತ್‌ಗೆ ತೆರಳಿದ್ದ ಸಿಬ್ಬಂದಿ ಡ್ಯೂಟಿ ಮುಗಿಸಿ ಮರಳಿ ಬರುವಾಗ ಅಪಘಾತ ನಡೆದಿದೆ. ಎದುರಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿ ಕಾನ್ಸ್‌ಟೇಬಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.