Site icon Vistara News

Crime news | ಮಗನಿಂದಲೇ ತಾಯಿಯ ಹತ್ಯೆ: ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಹೊಡೆದೇ ಕೊಂದ!

ಕಾರವಾರ: ಧೂರ್ತ ಮಗನೊಬ್ಬ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಭಯಾನಕ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಜಳ್ಳಿಯ ಗೀತಾ ಭಟ್‌ (೬೦) ಅವರನ್ನು ಅವರ ಮಗ ಮಧುಕರ ಭಟ್‌ ಎಂಬಾತ ಕೊಲೆ (Crime news) ಮಾಡಿದ್ದಾನೆ.

ಮದ್ಯಪಾನ ಸೇರಿದಂತೆ ದುಷ್ಚಟಗಳಿಗೆ ದಾಸನಾಗಿದ್ದ ಮಧುಕರ್‌ ಕುಡಿತಕ್ಕೆ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ. ಕೆಲವೊಮ್ಮೆ ಆತನ ಕಿರುಕುಳ ತಾಳಲಾರದೆ ಹಣ ಕೊಡಲೇಬೇಕಾಗಿ ಬರುತ್ತಿತ್ತು. ಆದರೆ, ಮಂಗಳವಾರ ಹಣ ಕೊಡಲಿಲ್ಲ. ಈ ಕಾರಣದಿಂದ ಸಿಟ್ಟಿಗೆದ್ದ ಮಧುಕರ್‌ ತಾಯಿ ಎಂದೂ ನೋಡದೆ ಆ ಹೆಣ್ಮಗಳನ್ನು ಹೊಡೆದೇ ಕೊಂದು ಹಾಕಿದ್ದಾನೆ. ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Murder case | ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ?; ಉದ್ಯಮಿ ಪುತ್ರನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

Exit mobile version