Site icon Vistara News

Murder case | ಕಿರಿಕಿರಿ ತಡೆಯಲಾಗದೆ ತವರಿಗೆ ಬಂದು ಬದುಕು ಕಟ್ಟಿಕೊಂಡಿದ್ದಳು: ಅಲ್ಲೂ ಬಿಡದೆ ಇರಿದು ಕೊಂದ ದುಷ್ಟ ಗಂಡ

Murder case

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚೂರಿಯಿಂದ ಅಮಾನುಷವಾಗಿ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿದ್ದಾನೆ. ಹೊಸಕೋಟೆ ತಾಲೂಕಿನ ಕಾವೇರಿ‌ ನಗರದಲ್ಲಿ ಸುಧಾಕರ್‌ ಎಂಬಾತ ತನ್ನ ಪತ್ನಿ ಪುಷ್ಪ (22) ಅವರನ್ನು ಕೊಂದು ಹಾಕಿದ್ದಾನೆ.

ಆರೋಪಿ ಪತಿ ಸುಧಾಕರ್‌

ಸುಧಾಕರ್‌ ಮತ್ತು ಪುಷ್ಪ ಅವರಿಗೆ ಮದುವೆಯಾಗಿ ಕೆಲವು ವರ್ಷಗಳೇ ಆಗಿವೆ. ಸುಧಾಕರ್‌ ಒಬ್ಬ ಅನುಮಾನ ಪಿಶಾಚಿ. ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸಲು ಸಾಧ್ಯವಾಗದೆ ಪುಷ್ಪಾ ಎರಡು ವರ್ಷಗಳ ಹಿಂದೆ ತನ್ನ ತವರಿಗೆ ಮರಳಿದ್ದಳು.

ಅಲ್ಲಿ ಪ್ರತ್ಯೇಕವಾಗಿ ಇದ್ದುಕೊಂಡೇ ಬದುಕು ಕಟ್ಟಿಕೊಂಡಿದ್ದಳು. ಆದರೆ, ದುಷ್ಟ ಸುಧಾಕರನಿಗೆ ಇದನ್ನೂ ಸಹಿಸಲು ಸಾಧ್ಯವಾಗಲಿಲ್ಲ. ಅವನು ಮಂಗಳವಾರ ಸಂಜೆ ಹೆಂಡತಿಯ ಮನೆಗೆ ಬಂದು ಗಲಾಟೆ ಮಾಡಿದ್ದ. ಪುಷ್ಪಾ ಮತ್ತು ಮನೆಯವರು ಆತನನ್ನು ಬೈದು ಬುದ್ಧಿ ಹೇಳಿ ಕಳುಹಿಸಿದ್ದರು.

ಆದರೆ, ಅಷ್ಟಕ್ಕೇ ಸುಮ್ಮನಾಗದ ಆತ ರಾತ್ರಿ ಸುಮಾರು ೭.೩೦ರ ಹೊತ್ತಿಗೆ ಮತ್ತೆ ಮನೆಗೆ ಏಕಾಏಕಿಯಾಗಿ ನುಗ್ಗಿದ್ದಾನೆ. ಜತೆಗೆ ಚೂರಿಯಿಂದ ಬೇಕಾಬಿಟ್ಟಿ ಇರಿದು ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಎಸ್ಕೇಪ್ ಆಗುತ್ತಿದ್ದ ವೇಳೆ‌ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು.

ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Murder by wife | ಫಾರ್ಮ್‌ ಕಾರ್ಮಿಕನ ಕೊಂದು ರಸ್ತೆಯಲ್ಲಿ ಎಸೆದರು: ಪತ್ನಿ ಮತ್ತು ಗೆಳೆಯನೇ ಹಂತಕರು?

Exit mobile version