ಚಿಕ್ಕಬಳ್ಳಾಪುರ: ಕಿರಾತಕನೊಬ್ಬ ವ್ಯಕ್ತಿಯ ಕತ್ತು ಸೀಳಿ ರಕ್ತ ಕುಡಿದು ವಿಕೃತಿ ಮೆರೆದಿರುವ ಭಯಾನಕ ಘಟನೆ ಜಿಲ್ಲೆಯ ಚಿಂತಾಮಣಿಯ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಚಿಂತಾಮಣಿ ಮೂಲದ ಬಟ್ಲಹಳ್ಳಿ ಗ್ರಾಮದ ವಿಜಯ್ ಕತ್ತು ಸೀಳಿದ ಆರೋಪಿ. ಚೇಳೂರು ತಾಲೂಕಿನ ಮಾರೇಶ್ ಗಾಯಾಳು. ಮೃಘದಂತೆ ವರ್ತಿಸಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಚಾರಣೆಗೆ ಕರೆತಂದ ವ್ಯಕ್ತಿ ಠಾಣೆಯಲ್ಲೇ ಸಾವು; ಆತ್ಮಹತ್ಯೆ ಶಂಕೆ
ಕಾರವಾರ: ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತಂದಿದ್ದ ವ್ಯಕ್ತಿ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಹಾರ ಮೂಲದ ದಿಲೀಪ್ ಮಂಡಲ್(37) ಎಂದು ಗುರುತಿಸಲಾಗಿದೆ. ಈತ ಪಟ್ಟಣದ ತುಳಸಿನಗರದಲ್ಲಿ ಬಂಗಾರ ತೊಳೆದುಕೊಡುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಬಂಗಾರ ತೊಳೆದುಕೊಡುವ ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾನೆ ಎನ್ನುವ ಆರೋಪದ ಮೇಲೆ ಈತನನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು.
ಇದನ್ನೂ ಓದಿ | Illicit relationship: ಪರಸಂಗದಲ್ಲಿದ್ದಾಗ ಹೆಂಡ್ತಿ ಕೈಗೆ ಸಿಕ್ಕಿಬಿದ್ದ; ಗೊಂದಲದ ಗೂಡಾಯ್ತು ಪಲ್ಲಂಗದ ಕತೆ!
ಠಾಣೆಯಲ್ಲಿ ಈತನನ್ನು ಕೂರಿಸಿ ಪೊಲೀಸ್ ಅಧಿಕಾರಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೀರು ಕುಡಿಯುವುದಾಗಿ ಸಿಬ್ಬಂದಿಗೆ ಹೇಳಿ ಬ್ಯಾಗಿನಲ್ಲಿದ್ದ ರಾಸಾಯನಿಕವನ್ನು ನೀರಿನ ಬಾಟಲ್‌ಗೆ ಹಾಕಿಕೊಂಡು ಕುಡಿದಿದ್ದಾನೆ. ಕೂಡಲೇ ಈತನನ್ನು ಪೊಲೀಸರು ತಾಲೂಕು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ. ಪೊಲೀಸರ ವಿಚಾರಣೆಗೆ ಹೆದರಿ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.