Site icon Vistara News

Stabbing Case: ಪ್ರೀತಿ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಯುವಕ

Stabbing case

ಹಾವೇರಿ: ಪ್ರೀತಿ ನಿರಾಕರಿಸಿದ ಪ್ರೇಯಸಿಗೆ ಯುವಕ ಚಾಕುವಿನಿಂದ ಇರಿದ ಘಟನೆ (Stabbing Case) ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ. ಕಳೆದ ಹಲವು ತಿಂಗಳಿನಿಂದ ಪ್ರೀತಿಸುವಂತೆ ಯುವಕ ದುಂಬಾಲು ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಗೆ ಚಾಕು ಇರಿದಿದ್ದಾನೆ.

ಶಿಗ್ಗಾವಿಯ ಲಕ್ಷ್ಮೀ ಪವಾರ್ ಗಾಯಾಳು ಯುವತಿ. ಮಹೇಶ ಚಾಕು ಇರಿದ ಆರೋಪಿ. ಶಿಗ್ಗಾವಿಯ ಜಯಲಕ್ಷ್ಮಿ ಮೆಡಿಕಲ್ ಶಾಪ್ ಬಳಿ ಘಟನೆ ನಡೆದಿದೆ. ಈತ ಪ್ರೀತಿಸುವಂತೆ ಹಲವು ತಿಂಗಳಿನಿಂದ ಯುವತಿಯ ಹಿಂದೆ ಬಿದ್ದಿದ್ದ. ಆದರೆ, ಆತನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಭಗ್ನ ಪ್ರೇಮಿಯು ಯುವತಿಗೆ ಚಾಕು ಇರಿದಿದ್ದಾನೆ.

ಇದನ್ನೂ ಓದಿ | Republic Day: ಧ್ವಜಾರೋಹಣ ವೇಳೆ ಗಾಳಿಯಲ್ಲಿ ಗುಂಡು; ಗ್ರಾ.ಪಂ ಅಧ್ಯಕ್ಷೆ ಕಾಲಿಗೆ ಗಾಯ

ಗಾಯಗೊಂಡ ಯುವತಿಯನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಗು ಶವ ಪತ್ತೆ

ರಾಮನಗರ: ನಗರದ ಶೀರಹಳ್ಳ ಬಳಿಯ ಜಿಲ್ಲಾ ಕ್ರೀಡಾಂಗಣದ ಹಿಂಭಾಗ 6 ವರ್ಷದ ಅಪರಿಚಿತ ಮಗುವಿನ ಶವ ಪತ್ತೆಯಾಗಿದೆ. ಕೊಲೆ ಮಾಡಿ ರೈಲ್ವೆ ಹಳಿ ಪಕ್ಕ ಬಿಸಾಕಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ರಾಮನಗರ ಎಎಸ್ಪಿ ಸುರೇಶ್, ಡಿವೈಎಸ್ಪಿ ದಿನಕರ್ ಶೆಟ್ಟಿ, ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧನ ಪಿಶಾಚಿ ಗಂಡ, ಕುಟುಂಬದ ಕಿರುಕುಳ; ಮಕ್ಕಳನ್ನು ಬಿಟ್ಟು ಗೃಹಿಣಿ ಆತ್ಮಹತ್ಯೆ

Dowry Harassment woman suicide

ಮೈಸೂರು: ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ಹಣಕ್ಕಾಗಿ ಕಿರುಕುಳ (Dowry Harassment) ನೀಡುತ್ತಿರುವುದರಿಂದ ಬೇಸತ್ತು ಬದುಕೇ ಸಾಕು ಎಂದು ತೀರ್ಮಾನಿಸಿದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ (woman Ends life by drinking Poison) ಮಾಡಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಹೊಸಕೋಟೆಯಲ್ಲಿ ಘಟನೆ ನಡೆದಿದ್ದು, ವಿಜಯಲಕ್ಷ್ಮಿ (35) ಆತ್ಮಹತ್ಯೆ ಶರಣಾದ ಗೃಹಿಣಿ.

ಮೈಸೂರು ತಾಲ್ಲೂಕಿನ ಬೊಮ್ಮೇನಹಳ್ಳಿಯ ವಿಜಯಲಕ್ಷ್ಮಿ ಅವರನ್ನು 12 ವರ್ಷಗಳ ಹಿಂದೆ ನಂಜನಗೂಡು ತಾಲ್ಲೂಕಿನ ಹೊಸಕೋಟೆಗೆ ಮದುವೆ ಮಾಡಿಕೊಡಲಾಗಿತ್ತು. ಹೊಸಕೋಟೆಯ ಹರೀಶ್ ಎಂಬುವರನ್ನು ಮದುವೆಯಾಗಿದ್ದ ವಿಜಯಲಕ್ಷ್ಮಿಗೆ ಅಂದಿನಿಂದ ಇಂದಿನವರೆಗೆ ಕಿರಿಕಿರಿ ತಪ್ಪಿರಲಿಲ್ಲ ಎನ್ನಲಾಗಿದೆ.

ಮದುವೆಯ ಸಂದರ್ಭದಲ್ಲಿ ವಿಜಯಲಕ್ಷ್ಮಿ ಪೋಷಕರು ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿದ್ದರು. ಆಗಿನಿಂದಲೇ ಹಣಕ್ಕಾಗಿ ಗಂಡ ಪೀಡಿಸುತ್ತಿದ್ದ ಎನ್ನಲಾಗಿದೆ. ಗಂಡನ ಒಬ್ಬನೇ ಅಲ್ಲ, ಇಡೀ ಮನೆ ಆಕೆಗೆ ಕಿರಿಕಿರಿ ಮಾಡುತ್ತಿತ್ತು. ಅತ್ತೆ, ಮಾವ, ಮೈದುನರಿಂದಲೂ ಕಿರುಕುಳ ಆಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ : Self Harming : 29ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡ 12 ವರ್ಷದ ಬಾಲಕಿ; ಏನಾಗಿತ್ತು ಆಕೆಗೆ?

ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ, ಮಹೇಂದ್ರರಿಂದಲೂ ಕಿರುಕುಳ ಆಗುತ್ತಿರುವ ಬಗ್ಗೆ ಆಕೆ ತನ್ನ ತಾಯಿ ಮನೆಯಲ್ಲೂ ಹೇಳಿಕೊಂಡಿದ್ದರು. ಸುಧಾರಿಸಿಕೊಂಡು ಹೋಗು ಎಂದು ತವರಿನಲ್ಲಿ ಸಮಾಧಾನ ಮಾಡಿದ್ದರು. ಹೀಗೆ ಕಿರಿಕಿರಿ ಮುಂದುವರಿದಾಗ ಗಲಾಟೆ ವಿಚಾರವಾಗಿ ಈ ಹಿಂದೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದ್ದಳು ವಿಜಯಲಕ್ಷ್ಮಿ.

ಆದರೆ, ಎಲ್ಲಿಯೂ ಕೂಡಾ ಆಕೆಗೊಂದು ನೆಮ್ಮದಿ ಸಿಗಲೇ ಇಲ್ಲ. ಅಂತಿಮವಾಗಿ ಆಕೆ ಈ ನೋವಿನಿಂದ ಮುಕ್ತಿ ಹೊಂದಲೇಬೇಕು ಎಂದು ತೀರ್ಮಾನಿಸಿ ಹೊಸಕೋಟೆಯ ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ. ಮಾಡಿಕೊಂಡಿದ್ದಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ತಾನೊಬ್ಬಳೇ ಪ್ರಾಣ ತೆಗೆದುಕೊಂಡಿದ್ದಾಳೆ.

ಇದನ್ನೂ ಓದಿ | Murder Case: ಕುಡಿಯಲು ಹಣ ಕೊಡದ್ದಕ್ಕೆ ಪತಿಯಿಂದ ಪತ್ನಿಯ ಹತ್ಯೆ

ವಿಜಯಲಕ್ಷ್ಮಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಗಂಡ, ಅತ್ತೆ, ಮಾವ, ಮೈದುನರು ಪರಾರಿಯಾಗಿದ್ದಾರೆ. ಹೆತ್ತವರು ಧಾವಿಸಿದ್ದು, ಕಿರುಕುಳ ನೀಡಿದವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version