Site icon Vistara News

ಚೂರಿ ಇರಿತದ ಆರೋಪದಲ್ಲಿ ವಿಚಾರಣೆಗೆ ಕರೆತಂದ ವ್ಯಕ್ತಿ ಪೊಲೀಸ್‌ ಠಾಣೆಯಿಂದಲೇ ಎಸ್ಕೇಪ್‌

siravara police station

ರಾಯಚೂರು: ಚಾಕು ಇರಿತದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಆರೋಪಿಯು ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್‌ 10ರ ಶನಿವಾರದಂದು ಸಂಜೆ ವೇಳೆ ಹಳೆದ್ವೇಷ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಇಮಾಮ್ ಎಂಬ ವ್ಯಕ್ತಿ ತಮ್ಮ ಸಹೋದರ ಸಂಬಂಧಿಗಳಾದ ಸದ್ದಾಂ ಅಲಿಯಾಸ್ ಬೆಟ್ಟಪ್ಪನ ಜೊತೆ ಹಳೆ ವೈಷಮ್ಯದ
ಹಿನ್ನೆಲೆ ಗಲಾಟೆ ‌ನಡೆಸಿದ್ದ. ಈ ವೇಳೆ ಸದ್ದಾಂ ಸೇರಿದಂತೆ ಗಲಾಟೆ ಬಿಡಿಸಲು ಹೋದ ವ್ಯಕ್ತಿ ಜಿಂದಾವಲಿಗೆ ಚಾಕುವಿನಿಂದ ಇರಿದು ಇಮಾಮ್ ‌ಕೊಲೆಗೆ ಯತ್ನಿಸಿದ್ದ. ಚಾಕು ಇರಿತದಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸದ್ದಾಂ ಮತ್ತು ಜಿಂದಾವಲಿಯನ್ನು ಸ್ಥಳೀಯರು ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದರು. ಕೆಲ ಹೊತ್ತಿನ ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ಸ್ಥಳೀಯರು ಮತ್ತು ಗಾಯಾಳು
ಗಳಿಂದ ಮಾಹಿತಿ ಪಡೆದು ಆರೋಪಿ ಇಮಾಮ್‌ನನ್ನು ವಶಕ್ಕೆ ಪಡೆದಿದ್ದರು…

ಆರೋಪಿ ಇಮಾಮ್ ಪೊಲೀಸರು ವಶಕ್ಕೆ ಪಡೆದು ವಿಚಾರ ತಿಳಿದು ಠಾಣೆಗೆ ಬಂದಿದ್ದ ಕುಟುಂಬಸ್ಥರು ಮನೆಯಿಂದಲೇ ಆರೋಪಿ ಎಸ್ಕೇಪ್ ಆಗಲು ಪ್ಲ್ಯಾನ್ ರೆಡಿ ಮಾಡಿದ್ದರು. ಪ್ಲ್ಯಾನ್ ಪ್ರಕಾರ ಸಿರವಾರ ಪೊಲೀಸ್ ಠಾಣೆಗೆ ಬರುವಾಗ ಬೈಕ್‌ನಲ್ಲಿ ಬಂದ ಮನೆಯವರು, ಠಾಣೆ ಒಳಗೆ ಬರುವಾಗ ಬೈಕ್ ಆನ್ ಮಾಡಿ ಬಂದಿದ್ದರೂ.ಈ ವೇಳೆ ಕುಟುಂಬಸ್ಥರ‌ ಜೊತೆ ಮಾತನಾಡುವ ಡ್ರಾಮಾ ಕ್ರಿಯೇಟ್ ಮಾಡಿದ್ದ ಇಮಾಮ್, ಅವರ ಜೊತೆ ಮಾತನಾಡುತ್ತಾ
ಕುಟುಂಬಸ್ಥರು ಬಂದ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ.

ಆರೋಪಿ ಎಸ್ಕೇಪ್ ಆಗಲು ಠಾಣೆ ಅಧಿಕಾರಿ ಮತ್ತು ‌ ಪೊಲೀಸರ ನಿರ್ಲಕ್ಷ್ಯ ತನ ಎಂದು ಆರೋಪಿ ಸಿರುವ ದೂರುದಾರರು ಕೂಡಲೇ ಆರೋಪಿಯನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲು ‌ಆಗಿರುವ ಗಾಯಾಳು ಸದ್ದಾಂ ಮತ್ತು ಜಿಂದಾವಲಿ ನಮ್ಮ ಕುಟುಂಬಕ್ಕೆ ಇಮಾಮ್ ನಿಂದ ಜೀವ ಬೆದರಿಕೆಯಿದೆ ಪೋಲಿಸರು ನಮ್ಮ ‌ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ
ಎಂದಿದ್ದಾರೆ.

Exit mobile version