Site icon Vistara News

Molester attacked | ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುಂಡನಿಗೆ ಸಾರ್ವಜನಿಕರಿಂದ ಚಪ್ಪಲಿ ಸೇವೆ

molestation

ಗದಗ: ಶಾಲೆ- ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸುತ್ತಿದ್ದ ಪುಂಡ ಯುವಕನಿಗೆ ಸಾರ್ವಜನಿಕರೇ ಸೇರಿ ಚೆನ್ನಾಗಿ ಚಪ್ಪಲಿ ಸೇವೆ ನಡೆಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಗ್ರಾಮದಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಹೊಡೆತ ತಿಂದವನನ್ನು ಗೋಜನೂರ ಗ್ರಾಮದ ಸಿದ್ದಪ್ಪ ಛಲವಾದಿ ಎಂದು ಗುರುತಿಸಲಾಗಿದೆ.

ಏನೆಲ್ಲಾ ಕಿತಾಪತಿ?
ಕಾಮುಕ ಸಿದ್ಧಪ್ಪ ಛಲವಾದಿ ಶಾಲೆ-ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸುತ್ತಿದ್ದ. ದಾರಿ ಮಧ್ಯೆ ನಿಂತು ಹುಡುಗಿಯರನ್ನು ಸನ್ನೆ ಮಾಡಿ ಕರೆಯುತ್ತಿದ್ದ ಈತ ʻʻನನ್ನ ನಂಬರ್ ತಗೋ ಫೋನ್ ಮಾಡುʼ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಜತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ.

ಯುವಕನ ಕಿರಿಕಿರಿಯಿಂದ ಬಾಲಕಿಯರು, ಯುವತಿಯರು ಭಾರಿ ಸಮಸ್ಯೆ ಎದುರಿಸುತ್ತಿದ್ದರು. ಈ ಹಿಂದೆ ಹಲವು ಬಾರಿ ಆತನಿಗೆ ಎಚ್ಚರಿಕೆ ನೀಡಲಾಗಿತ್ತು. ಊರಿನ ಹಿರಿಯರು ಆತನಿಗೆ ಈ ತರ ಮಾಡಬೇಡ ಎಂದು ಹೇಳಿದ್ದರು. ಆಗೆಲ್ಲ ತಪ್ಪಾಯಿತು ಎಂದು ಕಾಲಿಗೆ ಬೀಳುತ್ತಿದ್ದ ಆತನ ಬುದ್ಧಿ ಮಾತ್ರ ಸರಿ ಆಗಲೇ ಇಲ್ಲ. ಪಂಚಾಯಿತಿ ವೇಳೆ ಒಪ್ಪಿಕೊಂಡಿದ್ದ ಆತ ಬಳಿಕ ತನ್ನ ಹಳೆ ಚಾಳಿ ಮುಂದುವರಿಸಿದ್ದ.

ಚೆನ್ನಾಗಿ ಬಿತ್ತು ಗೂಸಾ
ಎಷ್ಟೇ ಬುದ್ಧಿ ಮಾತು ಹೇಳಿದರೂ ಮತ್ತೆ ಮತ್ತೆ ತನ್ನ ಹಳೆ ಚಾಳಿಯನ್ನು ಆರಂಭಿಸಿ, ಹುಡುಗಿಯರನ್ನು ನಿತ್ಯ ಹಿಂಬಾಲಿಸುತ್ತಿದ್ದ ಸಿದ್ದಪ್ಪನಿಗೆ ಶುಕ್ರವಾರ ಸಾರ್ವನಿಕರೆಲ್ಲ ಸೇರಿ ಚೆನ್ನಾಗಿ ಥಳಿಸಿದ್ದಾರೆ.

ಇದನ್ನೂ ಓದಿ | ಹುಡುಗಿಗೆ ಐಟಂ ಎಂದು ಚುಡಾಯಿಸಿದ್ದ ಯುವಕನಿಗೆ ಒಂದೂವರೆ ವರ್ಷ ಜೈಲು; ಅತ್ಯಂತ ಕೀಳು ಪದ ಎಂದ ಮುಂಬಯಿ ಕೋರ್ಟ್​

Exit mobile version