ಬೆಂಗಳೂರು: ಕುಡಿತದ ಚಟ ಬಿಡಲೆಂದು ಪುನರ್ವಸತಿ ಕೇಂದ್ರಕ್ಕೆ (Deadiction Center) ಹೋದವನು ಅಲ್ಲಿನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಗ್ಗಲಿಪುರದ ಡ್ರೀಮ್ಸ್ ಫೌಂಡೇಶನ್ ಎಂಬ ರಿಹಾಬ್ ಸೆಂಟರ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ಬಿ.ಆರ್. ಕುಮಾರ್ (೫೫) ಎಂದು ಗುರುತಿಸಲಾಗಿದೆ.
ಕುಮಾರ್ ಅವರ ಕುಡಿತದ ಚಟ ಬಿಡಿಸಲೆಂದು ರಿಹ್ಯಾಬಿಲಿಟೇಷನ್ ಸೆಂಟರ್‌ಗೆ ಸೇರಿಸಲಾಗಿತ್ತು. ಸುಮಾರು ಒಂದುವರೆ ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿದ್ದ ಇವರು ಎರಡು ದಿನದ ಹಿಂದೆ ಇದ್ದಕ್ಕಿದ್ದಂತೆಯೇ ಶೌಚಾಲಯದಲ್ಲಿ ಕಿಟಕಿಗೆ ನೈಟ್ ಪ್ಯಾಂಟ್ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಲೀಕನ ಮೇಲೆ ಆರೋಪ
ಈ ನಡುವೆ, ಕುಮಾರ್ ಅವರದು ಸಾವಲ್ಲ, ಕೊನೆ ಎಂದು ಅವರ ಅಣ್ಣ ನಾಗರಾಜಯ್ಯ ಆರೋಪಿಸಿದ್ದಾರೆ. ಡ್ರೀಮ್ ಫೌಂಡೇಶನ್ ರಿಹಾಬ್ ಸೆಂಟರ್‌ನ ಮಾಲೀಕ ಮಂಜುನಾಥ್ ಅವರು ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸಿದ್ದಾರೆ ಎನ್ನುವುದು ಕುಮಾರ್ ಅವರ ಪತ್ನಿ ರೇಖಾ ಮತ್ತು ಸಂಬಂಧಿಕರ ಆರೋಪ. ಹೀಗಾಗಿ ಕಗ್ಗಲಿಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Sudheer Varma Death: ಕುಂದನಪು ಬೊಮ್ಮ ಖ್ಯಾತಿಯ ತೆಲುಗು ನಟ ಸುಧೀರ್ ವರ್ಮಾ ಆತ್ಮಹತ್ಯೆ