ಮಂಡ್ಯ: 2024-24ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯ ಫಲಿತಾಂಶ (CBSE Class 10 Results) ಸೋಮವಾರ ಪ್ರಕಟಗೊಂಡಿದ್ದು, ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿರುವ ಪ್ರತಿಷ್ಠಿತ ಅಕ್ಷರ ಇಂಟರ್‌ನ್ಯಾಷನಲ್ ಸ್ಕೂಲ್ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಅಮೋಘ ಸಾಧನೆ ಮಾಡಿದೆ. ಈ ಬಾರಿ ಪರೀಕ್ಷೆಗೆ 56 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಸತತ 9ನೇ ಬಾರಿ ಅಕ್ಷರ ಇಂಟರ್‌ನ್ಯಾಷನಲ್ ಸ್ಕೂಲ್ ಶೇ.100 ಫಲಿತಾಂಶ ದಾಖಲಿಸಿ ರಾಜ್ಯದ ಗಮನ ಸೆಳೆದಿದೆ.
ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಧನಂಜಯ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಗೋರ್ವಧನ್ ಗೌಡ ಶೇ. 95, (ಇಂಗ್ಲಿಷ್ 88, ಕನ್ನಡ 96, ಗಣಿತ 97, ವಿಜ್ಞಾನ 95, ಸಮಾಜ 98) ಸಾನ್ವಿ ಯು ಗೌಡ ಶೇ.90, (ಇಂಗ್ಲಿಷ್ 94, ಕನ್ನಡ 98, ಗಣಿತ 66, ವಿಜ್ಞಾನ 95, ಸಮಾಜ 95) ಫಲಿತಾಂಶ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದ ಪ್ರಶಾಂತ ವಾತಾವರಣದಲ್ಲಿ 2013ರಲ್ಲಿ ಪ್ರಾರಂಭವಾದ ಅಕ್ಷರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ರೈತಾಪಿ ವರ್ಗದ ಮಕ್ಕಳು, ಗ್ರಾಮೀಣ ಪ್ರದೇಶದ ಮಕ್ಕಳು ಸೇರಿದಂತೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆಯುತ್ತಿದ್ದಾರೆ.
ಇದನ್ನೂ ಓದಿ | CBSE 12th Results 2024: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, 87.98% ಪಾಸ್
ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸುತ್ತಿರುವುದು ಅಕ್ಷರ ಶಾಲೆಯ ಹೆಗ್ಗಳಿಕೆಯಾಗಿದ್ದು, ಜಿಲ್ಲೆಯಾದ್ಯಂತ ಪೋಷಕರ ನೆಚ್ಚಿನ ಶಾಲೆಯಾಗಿ ಮನೆಮಾತಾಗಿದೆ. ಪೋಷಕರಿಗೆ ಹೆಚ್ಚಿನ ಹೊರಯಾಗಬಾರದು ಎಂಬ ನಿಟ್ಟಿನಲ್ಲಿ ಕಡಿಮೆ ಫೀಸ್ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಲವು ರಾಜ್ಯಗಳ ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾದ್ದು, ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಸುವಲ್ಲಿ ಇದು ನೆರವಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಒಲಿಂಪಿಕ್ಸ್ ಮಾದರಿಯ ಸ್ವಿಮ್ಮಿಂಗ್ ಫೂಲ್, ಅತ್ಯಾಧುನಿಕ ಲೈಬ್ರರಿ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಸಕಲ ಸೌಲಭ್ಯ ಒದಗಿಸಲಾಗಿದೆ. ಹಾಸ್ಟೆಲ್, ಶಾಲಾ ವಾಹನ ವ್ಯವಸ್ಥೆಯೂ ಲಭ್ಯವಿದೆ.