Site icon Vistara News

ಎಡಮುರಿ ನದಿ ನೀರಿನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು

death

ಮಂಡ್ಯ: ನದಿ ನೀರಿನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಬಳಿಯ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದು ಈಜಲು ಹೋಗಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಮೈಸೂರಿನ ಬಸುದೇವ ಸೋಮಾನಿ ಕಾಲೇಜಿನ ವಿದ್ಯಾರ್ಥಿ ಯೋಗೇಶ್ (23) ಮೃತ ದುರ್ದೈವಿ.

ಯೋಗೇಶ್ ನೆನ್ನೆ ಸಂಜೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಎಡಮುರಿಗೆ ಬಂದಿದ್ದ. ಈ ವೇಳೆ ಸ್ನೇಹಿತರ ಜೊತೆ ನದಿಯಲ್ಲಿ ಈಜುವಾಗ ಮುಳಗಿ ಸಾವನ್ನಪ್ಪಿದ್ದಾನೆ. ಪೊಲೀಸರ ಕಾರ್ಯಾಚರಣೆ ಬಳಿಕ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ನವಜಾತ ಶಿಶುವನ್ನು ಪಾಳು ಬಾವಿಗೆ ಎಸೆದ ತಾಯಿ: ಗ್ರಾಮಸ್ಥರಿಂದ ರಕ್ಷಣೆ; ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆ

Exit mobile version