ಮಂಡ್ಯ: ರೈತ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆಗೆಯುವುದು, ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ ಸೇರಿದಂತೆ ಹತ್ತು ಹಲವು ರೈತಪರ ಯೋಜನೆಗಳನ್ನು ರಾಷ್ಟ್ರೀಯ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ರೈತ ಪರ ಕಾಯ್ದೆ ಜಾರಿಗಾಗಿ ಮತದಾರರು ಕಾಂಗ್ರೆಸ್ (Congress) ಅನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Lok Sabha Election 2024) ತಿಳಿಸಿದರು.
ನಾಗಮಂಗಲ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮತ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದರು.
ಇದನ್ನೂ ಓದಿ: Summer Tour: ಬಿರು ಬೇಸಿಗೆಯಲ್ಲೂ ತಂಪಾದ ಅನುಭವ ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು
ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವರು, ನಮ್ಮ ಪ್ರತಿಸ್ಪರ್ಧಿಯು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಅಂತರಾಳದಲ್ಲಿ ಏನಿದೆ ಎಂಬುದು ಅವರ ಮಾತುಗಳಿಂದ ವ್ಯಕ್ತವಾಗುತ್ತಿವೆ. ಹಿಂದೆಯೂ ಸಹ ಮಹಿಳೆಯರ ಬಗ್ಗೆ ಅಗೌರವದ ಮಾತುಗಳನ್ನಾಡಿದ್ದರು. ಮಹಿಳೆಯರಿಗೆ ಅಪಮಾನವಾಗುವಂತಹ ಮಾತನಾಡಿ ಈಗ ವಿಷಾದ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕೈ ಹಿಡಿಯಲಿವೆಯೇ ಹೊರತು ಮೋದಿ ಗ್ಯಾರಂಟಿ ಏನು ವರ್ಕ್ ಆಗಲ್ಲ. ರಾಜ್ಯಕ್ಕೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಈಗ ರಾಷ್ಟ್ರವ್ಯಾಪಿ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: Share Market: ಇಸ್ರೇಲ್- ಇರಾನ್ ಯುದ್ಧಕ್ಕೆ ನಲುಗಿದ ಮುಂಬಯಿ ಷೇರುಪೇಟೆ; 6 ಲಕ್ಷ ಕೋಟಿ ರೂಪಾಯಿ ಢಮಾರ್
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ಈ ಜಿಲ್ಲೆಯವನು, ರೈತನ ಮಗ. ರೈತರ ಕಷ್ಟ, ಜಿಲ್ಲೆಯ ನಾಡಿಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ದೇಶ ವ್ಯಾಪಿ ಗ್ಯಾರಂಟಿ ಜಾರಿಗೆ ಕಾಂಗ್ರೆಸ್ ಬೆಂಬಲಿಸಿ, ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.