Site icon Vistara News

Mandya News: ಕಾಂಗ್ರೆಸ್‌ ಗ್ಯಾರಂಟಿಗಳು ನನ್ನ ‘ಕೈ’ ಹಿಡಿಯಲಿವೆ; ವೆಂಕಟರಮಣೇಗೌಡ ವಿಶ್ವಾಸ

Mandya Lok Sabha constituency Congress candidate Venkataramane Gowda Election campaign at K R Pete taluk

ಕೆ.ಆರ್.ಪೇಟೆ: ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಗೆಲುವಿಗೆ ಸಹಕಾರಿಯಾಗಲಿದ್ದು, ಜನ ನನ್ನ ‘ಕೈ’ ಹಿಡಿಯಲಿದ್ದಾರೆ ಎಂದು ಮಂಡ್ಯ (Mandya News) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ತಿಳಿಸಿದರು.

ತಾಲೂಕಿನ ನಾನಾ ಕಡೆಗಳಲ್ಲಿ ಮತಪ್ರಚಾರದಲ್ಲಿ ತೊಡಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ಈ ಸಂದರ್ಭದಲ್ಲಿ ಗ್ಯಾರಂಟಿಗಳು ಜನರ ಸಂಕಷ್ಟಕ್ಕೆ ನೆರವಾಗಿವೆ. ಪಂಚ ಗ್ಯಾರಂಟಿಗಳ ಜತೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿರುವ ನ್ಯಾಯಪತ್ರ ಕೂಡ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದರು.

ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಉತ್ತಮ ಸ್ಪಂದನೆ ಸಿಗುತ್ತಿದೆ. ಅದರಲ್ಲೂ ಮಹಿಳೆಯರು ಎಲ್ಲೆಡೆ ಆರತಿ ಎತ್ತಿ ಬರಮಾಡಿಕೊಳ್ಳುತ್ತಿದ್ದಾರೆ. ಉಚಿತ ಬಸ್ ಪ್ರಯಾಣ, ವಿದ್ಯುತ್, ತಿಂಗಳಿಗೆ ಎರಡು ಸಾವಿರ ಹಣ ಸಿಗುತ್ತಿರುವುದರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವುದರ ಜತೆಗೆ ಕಾಂಗ್ರೆಸ್ ಬೆಂಬಲಿಸುವ ಭರವಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Class 5 8 9 Exam Result: 5, 8 ಹಾಗೂ 9ನೇ ತರಗತಿ ಬೋರ್ಡ್‌ ಪರೀಕ್ಷೆ ಫಲಿತಾಂಶ ಪ್ರಕಟ; ಶಾಲೆಯಲ್ಲೇ ಸಿಗಲಿದೆ ರಿಪೋರ್ಟ್‌ ಕಾರ್ಡ್‌

ನಾನು ಉತ್ತಿದ್ದೇನೆ, ಬಿತ್ತಿದ್ದೇನೆ. ಒಕ್ಕಲುತನ ಮಾಡಿದ್ದಾನೆ. ರೈತಾಪಿ ವರ್ಗದವರ ಕಷ್ಟಸುಖಗಳನ್ನು ಚೆನ್ನಾಗಿ ಬಲ್ಲೆ. ನಾನು ಇದೇ ಜಿಲ್ಲೆಯ ಮಣ್ಣಿನ ಮಗ. ನಾನು ಈ ಜಿಲ್ಲೆಯ ರೈತನ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ ಎಂದರು.

ದೇವಸ್ಥಾನಕ್ಕೆ ತೆರಳಿ ಪೂಜೆ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಕೆ.ಆರ್.ಪೇಟೆ ತಾಲೂಕಿನ ಮಲಕೋನಹಳ್ಳಿಯಲ್ಲಿರುವ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.

ಐಚನಹಳ್ಳಿ, ಬೂಕನಕೆರೆ, ಬಲ್ಲೇನಹಳ್ಳಿ, ಗಂಜಿಗೆರೆ, ಬಳ್ಳೇಕೆರೆ, ಮಡವಿನ ಕೋಡಿ, ಹರಿಹರಪುರ, ಬಂಡಿಹೊಳೆ, ಮಾಕವಳ್ಳಿ, ಚೌಡೇನಹಳ್ಳಿ, ದಬ್ಬೆಘಟ್ಟ, ಮಾದಾಪುರ, ಆನೆಗೋಳ, ಐಕನಹಳ್ಳಿ, ಲಕ್ಷ್ಮಿಪುರ, ಕಿಕ್ಕೇರಿ ಸೇರಿದಂತೆ ನಾನಾ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಇದನ್ನೂ ಓದಿ: Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ

ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜ್‌, ಮಂಡ್ಯ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್, ರಮೇಶ್, ಕೃಷ್ಣಮೂರ್ತಿ, ಕೆ.ಬಿ.ರಮೇಶ್ ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಇದ್ದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಳ್ಳೇಕೆರೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಬಿಜೆಪಿ ಕಾರ್ಯಕರ್ತರು ಹಾಗೂ ಹರಿಹರಪುರದಲ್ಲಿ ಕೆ.ಆರ್.ಪೇಟೆ ತಾಲೂಕು ಬಿಜೆಪಿ ಮಹಿಳಾ ಉಪಾಧ್ಯಕ್ಷರು, ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಸ್ಟಾರ್ ಚಂದ್ರು ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಭೂ ವರಹಸ್ವಾಮಿ ‌ದೇವಾಲಯಕ್ಕೆ ಭೇಟಿ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿಯಲ್ಲಿನ ಪುರಾಣ ಪ್ರಸಿದ್ಧ ಭೂ ವರಹಸ್ವಾಮಿ ‌ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: IPL 2024: ಗುಜರಾತ್‌ 54/0, 130ಕ್ಕೆ ಆಲೌಟ್;‌ ಕನ್ನಡಿಗ ರಾಹುಲ್‌ ಕ್ಯಾಪ್ಟನ್ಸಿಗೆ ಉಘೇ ಎಂದ ಜನ!

ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಮಂಡ್ಯ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಬಿ.ಎಲ್.ದೇವರಾಜ್‌, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್, ರಮೇಶ್, ಕೃಷ್ಣಮೂರ್ತಿ, ಕೆ.ಬಿ.ರಮೇಶ್ ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಇದ್ದರು.

Exit mobile version