Site icon Vistara News

Mandya Politics: ಸುಮಲತಾ ಅಂಬರೀಶ್‌ ಎಲ್ಲರ ವಿಶ್ವಾಸ ಕಳೆದುಕೊಂಡಿದ್ದಾರೆ: ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

ravindra srikantayya sumalatha

ಬೆಂಗಳೂರು: ಮಂಡ್ಯ (Mandya Politics) ಸಂಸದೆ ಸುಮಲತಾ ಅಂಬರೀಶ್‌ ಅವರು ಎಲ್ಲರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಸುಮಲತಾಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ಕರೆ ತೋರುತ್ತಿಲ್ಲ. ಬಿಜೆಪಿ ಸೇರಲು ಅನೇಕ‌ ಕಂಡಿಷನ್ ಹಾಕಿದ್ರು, ಅವರು‌ ಒಲವು ತೋರುತ್ತಿಲ್ಲ ಎಂದರು.

ಅವರು ಕಾಂಗ್ರೆಸ್‌ ನಾಯಕರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಈಗ ಚೆಲುವರಾಯಸ್ವಾಮಿ ಕೂಡ ವಿರೋಧ ಮಾಡ್ತಿದ್ದಾರೆ. ಜನಸ್ಪಂದನೆ ಕಳೆದುಕೊಂಡ ಮೇಲೆ ಯಾರೂ ಆಹ್ವಾನ ನೀಡುತ್ತಿಲ್ಲ. ಸುಮಲತಾ ದಿಶಾ ಮೀಟಿಂಗ್ ಮಾಡೋದಕ್ಕೆ ಫಸ್ಟ್ ಪ್ರೈಸ್ ಕೊಡಬೇಕು ಅಷ್ಟೆ.

ಇದನ್ನೂ ಓದಿ: Sumalatha Ambareesh | ಸುಮಲತಾ ರಾಜ್ಯ ರಾಜಕೀಯ ಪ್ರವೇಶಕ್ಕೆ ವೇದಿಕೆ ರೆಡಿ: ಯಾವ ಪಕ್ಷ ಸೇರ್ತಾರೆ?

ಆದರೆ ಮತದಾರರನ್ನು ಭೇಟಿ ಮಾಡಿಲ್ಲ, ಜನರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಲ್ಲ. ಅವರಿಗೆ ಮಾರ್ಕ್ಸ್ ನೀಡಲು ಜನರ ಬಳಿ ಹೋಗಿಲ್ಲ. ಜನಸೇವೆಯಲ್ಲಿ ಸುಮಲತಾಗೆ ಝೀರೋ ಮಾರ್ಕ್ಸ್ ನೀಡಬೇಕು ಅಷ್ಟೆ ಎಂದರು.

ಮಂಡ್ಯ ಜಿಲ್ಲಾ ಬಿಜೆಪಿ ಉಸ್ತುವಾರಿ ಕುರಿತು ಮಾತನಾಡಿದ ರವೀಂದ್ರ, ಮೊದಲು ನಾರಾಯಣ್ ಗೌಡ್ರು ಇದ್ರು. ಮತ್ತೆ ಆರ್. ಅಶೋಕ್ ಗೆ ಕೊಟ್ಟಿದ್ರು. ಈಗ ಅವರ ಮೇಲೆ ಅಪನಂಬಿಕೆ ಇಟ್ಟುಕೊಂಡು ತೆಗೆದಿದ್ದಾರೆ. ಬಿಜೆಪಿಯಲ್ಲಿ ಅವರ ನಾಯಕರ ಮೇಲೆ ನಂಬಿಕೆಯಿಲ್ಲದಂತೆ ಆಗಿದೆ ಎಂದರು.

Exit mobile version