ಮಂಡ್ಯ : ತಮ್ಮ ಮೆಚ್ಚಿನ ಶಿಕ್ಷಕ ವರ್ಗಾವಣೆಗೊಂಡಿದ್ದರಿಂದ ಮಕ್ಕಳು ಭಾವೋದ್ವೇಗಕ್ಕೆ ಒಳಗಾಗಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ (Viral Video ) ವೈರಲ್ ಆಗಿದೆ. ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಗೋಳಾಡಿದ್ದಾರೆ.
ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಗುರುವಿನ ಪಾತ್ರ ದೊಡ್ಡದು. ಆದರೆ ಕೇವಲ ಸಂಬಳಕ್ಕಾಗಿ ಅಥವಾ ಯಾಂತ್ರಿಕವಾಗಿ ಪಾಠ ಮಾಡುವ ಶಿಕ್ಷಕರೂ ಸಾಕಷ್ಟಿದ್ದಾರೆ. ಇವೆಲ್ಲದರ ನಡುವೆ ವಿದ್ಯೆಯನ್ನು ಧಾರೆಯೆರೆದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯುವಂತಹ ಶಿಕ್ಷಕರೂ ನಮ್ಮ ಕಣ್ಣ ಮುಂದೆ ಇದ್ದಾರೆ. ಇಂಥವರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾಲೆಯ ಶಿಕ್ಷಕ ಪುಟ್ಟರಾಜಯ್ಯ ಒಬ್ಬರು.
ಇದನ್ನೂ ಓದಿ | ಗುರುಪೂರ್ಣಿಮೆ ವಿಶೇಷ | ಆಟದ ಸಾಮಗ್ರಿಗಳನ್ನು ಬಳಸಿ ದೇವರಿಗೆ ವಿಶೇಷ ಅಲಂಕಾರ
ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪುಟ್ಟರಾಜಯ್ಯ ವರ್ಗಾವಣೆಗೊಂಡಿದ್ದಾರೆ. ಅವರು ಅಲ್ಲಿಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರುವಾಗಿದ್ದರು. ಹಾಗಾಗಿ ಶಾಲೆ ಬಿಟ್ಟು ಹೋಗದಂತೆ ಅವರ ಕಾಲಿಗೆ ಬಿದ್ದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದರು. ಗ್ರಾಮಸ್ಥರು ಹಾಗೂ ಪೋಷಕರೂ ಪುಟ್ಟರಾಜಯ್ಯ ಅವರಿಗೆ ಈ ಶಾಲೆ ಬಿಟ್ಟು ತೆರಳದಂತೆ ವಿನಂತಿಸಿ ಕಾಲಿಗೆ ಬಿದ್ದು ನಮಸ್ಕರಿಸಿದರು. ಗ್ರಾಮದಲ್ಲಿ ಉತ್ತಮ ಶಿಕ್ಷಕ ಎನಿಸಿಕೊಂಡಿದ್ದ ಪುಟ್ಟರಾಜಯ್ಯ ಅವರು ಕೊರೊನಾ ಸಂದರ್ಭದಲ್ಲೂ ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಿ ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ | ಸಮಾಜಸೇವೆ ಮಾಡಲು ಹೋದ ಶಿಕ್ಷಕನಿಗೆ ಥಳಿಸಿದ ಪೆಟ್ರೋಲ್ ಬಂಕ್ ಮಾಲೀಕ