ಮಂಗಳೂರು: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರಿಕಾ ಬೋಟ್‌ಗಳ ಮೇಲೆ ತಮಿಳುನಾಡು ಮೂಲದ ಮೀನುಗಾರರು ಕಲ್ಲು ತೂರಾಟ (Attack on fishermen) ನಡೆಸಿದ ಘಟನೆ ನಡೆದಿದೆ.
ಮಂಗಳೂರಿನ ಮೀನುಗಾರರು ಸುಮಾರು ಏಳೆಂಟು ಬೋಟ್‌ಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಬೋಟ್‌ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಸಾಗಿದ್ದವು. ಈ ಹಂತದಲ್ಲಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಮೀನುಗಾರರು ತಡೆ ಒಡ್ಡಿದರು ಎನ್ನಲಾಗಿದೆ.
ಮಾತ್ರವಲ್ಲ ಹತ್ತಕ್ಕೂ ಹೆಚ್ಚು ಬೋಟ್‌ಗಳಿಂದ ಸುತ್ತುವರಿದು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಮಂಗಳೂರಿನ ಮೀನುಗಾರರಲ್ಲಿ ಹಲವರಿಗೆ ಗಾಯಗಳಾಗಿವೆ. ಕಲ್ಲುಗಳನ್ನು ತಂದು ಎಸೆಯುತ್ತಿರುವ ವಿಡಿಯೊ ಲಭ್ಯವಿದೆ.
ತಾವು ಆಳ ಸಮುದ್ರ ಮೀನುಗಾರಿಕೆ ನಿಯಮಗಳನ್ನು ಮೀರಿಲ್ಲ. ಆದರೆ, ತಮಿಳುನಾಡಿನ ಮೀನುಗಾರರು ದ್ವೇಷದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಮಂಗಳೂರಿನ ಮೀನುಗಾರರು ಆರೋಪಿಸಿದ್ದಾರೆ. ಈ ಬಗ್ಗೆ ಮುಂದೆ ತನಿಖೆ ಆಗಬೇಕಾಗಿದೆ.
ಇದನ್ನೂ ಓದಿ : Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್