Site icon Vistara News

Mangalore drugs case : ಡ್ರಗ್ಸ್‌ ಜಾಲದಲ್ಲಿ ಸಿಲುಕಿದ ಇಬ್ಬರು ವೈದ್ಯರು ಸೇವೆಯಿಂದ ವಜಾ, ಏಳು ಮೆಡಿಕಲ್‌ ವಿದ್ಯಾರ್ಥಿಗಳು ಸಸ್ಪೆಂಡ್‌

ಗಾಂಜಾ

ಮಂಗಳೂರು: ಇತ್ತೀಚೆಗೆ ಬಯಲಾದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಡ್ರಗ್ಸ್‌ ಜಾಲದಲ್ಲಿ ಸಿಲುಕಿದವರಿಗೆ ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ವಜಾ ಮತ್ತು ಅಮಾನತಿನ ಶಿಕ್ಷೆಯನ್ನು ನೀಡಿದೆ.

ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಮೆಡಿಕಲ್‌ ಆಫೀಸರ್‌ ಆಗಿದ್ದ ಡಾ.ಸಮೀರ್ ಮತ್ತು ಮಣಿಪಾಲ ಕೆಎಂಸಿಯಲ್ಲಿ ಮೆಡಿಕಲ್‌ ಸರ್ಜನ್‌ ಆಗಿದ್ದ ಡಾ.ಮಣಿಮಾರನ್ ಮುತ್ತು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ಕಿಶೋರಿ ಲಾಲ್, ಡಾ.ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ.ರಿಯಾ ಚಡ್ಡ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್ ಗುಪ್ತಾ, ಡಾ.ಹರ್ಷ ಕುಮಾರ್ ವಿ.ಎಸ್. ಅವರನ್ನು ಅಮಾನತು ಮಾಡಲಾಗಿದೆ.

ಮಂಗಳೂರಿನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪೆಡ್ಲಿಂಗ್ ಹಾಗೂ ಗಾಂಜಾ ಸೇವನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಕೆಎಂಸಿ‌ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ. ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಸ್ಪತ್ರೆಯಿಂದ ಅಮಾನತು ಮಾಡಿದೆ. ಮಂಗಳೂರು ಪೊಲೀಸ್‌ ಕಮಿಷನರ್ ಕಚೇರಿಗೆ ಆಗಮಿಸಿರುವ ಕೆಎಂಸಿ ಡೀನ್ ಉನ್ನಿಕೃಷ್ಣನ್ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಮಾನತುಗೊಂಡವರು ಮತ್ತು ಸೇವೆಯಿಂದ ಅಮಾನತುಗೊಂಡವರೆಲ್ಲರೂ ೨೩ರಿಂದ ೩೦ ವರ್ಷದವರಾಗಿದ್ದು ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳ ಚಟ ಅಂಟಿಸಿಕೊಂಡವರು. ಇವರಲ್ಲಿ ವಿದ್ಯಾರ್ಥಿನಿಯರೂ ಇದ್ದಾರೆ. ಲಿವ್‌ ಇನ್‌ ರಿಲೇಷನ್‌ ಶಿಪ್‌ ಮೂಲಕ ಮಾದಕ ದ್ರವ್ಯಗಳ ಚಟಕ್ಕೆ ಬೀಳುವ ಇವರು ಸೆಕ್ಸ್‌ ಹಗರಣಗಳಲ್ಲೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅದರೆ, ಇದೆಲ್ಲವೂ ಸಮ್ಮತಿಯ ಸಂಬಂಧಗಳಾಗಿರುವುದರಿಂದ ಯಾರೂ ದೂರು ನೀಡಿಲ್ಲ. ಒಟ್ಟಾರೆಯಾಗಿ ವೈದ್ಯಕೀಯ ಲೋಕದಲ್ಲಿ ಸಾಧನೆ ಮಾಡುತ್ತಾ ಜನರಿಗೆ ನೆರವಾಗಬೇಕಾದ ಪ್ರತಿಭಾವಂತ ಮಾದಕ ಮತ್ತು ಸೆಕ್ಸ್‌ ಜಾಲಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ | Drugs Mafia | ಇದು ಬರೀ ಮಾದಕ ಲೋಕವಲ್ಲ, ಲಿವಿಂಗ್‌ ಟುಗೆದರ್‌, ಸೆಕ್ಸ್‌ ಬೆರೆತ ವೈದ್ಯ ವಿದ್ಯಾರ್ಥಿಗಳ ಕರಾಳ ಲೋಕ

Exit mobile version