Site icon Vistara News

Mangalore News : ಟಾಯ್ಲೆಟ್‌ ರೂಂನಲ್ಲಿ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡ ಪಿಎಸ್‌ಐ!

Crime Sense

ಮಂಗಳೂರು: ಇಲ್ಲಿನ ನವ ಮಂಗಳೂರು ಬಂದರಿನ (Mangalore News) ಮುಖ್ಯ ದ್ವಾರದ ಬಳಿ ತಮ್ಮದೇ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸಿಐಎಸ್ಎಫ್ ಪಿಎಸ್‌ಐ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಪಿಎಸ್‌ಐ ಝಾಕೀರ್ ಹುಸೈನ್ (58) ಆತ್ಮಹತ್ಯೆ ಮಾಡಿಕೊಂಡವರು.

ರಾಯಚೂರು ಮೂಲದ ಝಾಕೀರ್ ಹುಸೈನ್ (58) ಎನ್ಎಂಪಿಟಿ ಮುಖ್ಯದ್ವಾರದಲ್ಲಿ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ಭಾನುವಾರ ಬೆಳಗ್ಗೆ 6.30ಕ್ಕೆ ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಶೌಚಾಲಯಕ್ಕೆ ಹೋದವರು ಅಲ್ಲೇ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಗುಂಡಿನ ಸದ್ದು ಕೇಳಿ ಶೌಚಾಲಯಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version