Site icon Vistara News

Mangalore Blast | ಮಂಗಳೂರಿನ ಆಟೊ ರಿಕ್ಷಾದಲ್ಲಿ ಲಘು ಐಇಡಿ ಬಾಂಬ್‌ ಸ್ಫೋಟ

auto

ಮಂಗಳೂರು: ಮಂಗಳೂರಿನಲ್ಲಿ ಶನಿವಾರ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ( Mangalore Blast ) ಲಘು ಐಇಡಿ ಬಾಂಬ್‌ ಅನ್ನು ಬಳಸಲಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ.

ಪ್ಲಾನ್ ಮಾಡಿದ್ದ ಸ್ಥಳಕ್ಕೆ ಸಾಗಿಸುವ ಮೊದಲೆ ಆಟೊ ರಿಕ್ಷಾದಲ್ಲಿ ಈ ಬಾಂಬ್‌ ಸ್ಫೋಟವಾಗಿದೆ. ಇದನ್ನು ಭಯೋತ್ಪಾದಕ ಕೃತ್ಯ ಎಂದು ಪೊಲೀಸ್‌ ಇಲಾಖೆ ದೃಢಪಡಿಸಿದೆ.

ಈಗಾಗಲೇ ಈ ಸ್ಫೋಟದಲ್ಲಿ ಭಾಗಿಯಾಗಿರುವ ಒಬ್ಬನನ್ನು ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆತನಿಗೆ ಸ್ಫೋಟದಲ್ಲಿ ಗಾಯಗಳಾಗಿದ್ದು,… ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಕಲಿ ಆಧಾರ್‌ ಕಾರ್ಡ್‌ ಅನ್ನು ಆತನಿಂದ ಜಪ್ತಿ ಮಾಡಲಾಗಿದೆ. ಮಂಗಳೂರು ಹಾಗು ಮಂಗಳೂರು ಹೊರ ವಲಯದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಲವಾರು ತಂಡಗಳನ್ನು ರಚನೆ ಮಾಡಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.…ಮತ್ತಷ್ಟು ಜನರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಲಘು ಐಇಡಿ ಬಾಂಬ್‌ (Improvised explosive device) ಸ್ಫೋಟವಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿವೆ.

ಇದನ್ನೂ ಓದಿ: Mangalore Blast | ಆಟೋ ಸ್ಫೋಟದ ಮಾಸ್ಟರ್‌ ಮೈಂಡ್‌ ಶಾರೀಕ್‌; ಮಂಗಳೂರು ಗೋಡೆ ಬರಹ ಪ್ರಕರಣದ 2ನೇ ಆರೋಪಿ ಈತ

Exit mobile version