Site icon Vistara News

Fake profile: ಹುಡುಗಿ ಹೆಸರಲ್ಲಿ ಚಾಟಿಂಗ್‌ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ತೊಡೆಗೆ ಇರಿತ

#image_title

ಬೆಂಗಳೂರು: ಇಲ್ಲಿನ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬನನ್ನು ಮಾತನಾಡಿಸುವ ನೆಪದಲ್ಲಿ ಕರೆಸಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಚೇತನ್‌ ಎಂಬುವವನು ಸಿದ್ದಾರ್ಥನಿಗೆ ಚಾಕು ಇರಿದು ಹಲ್ಲೆ (Manhandling case) ನಡೆಸಿದ್ದಾನೆ.

ಆರೋಪಿ ಚೇತನ್‌ ಇನ್ಸ್ಟಾಗ್ರಾಮ್‌ನಲ್ಲಿ ಕೀರ್ತಿ ಎಂಬ ಹುಡುಗಿಯ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದ. ಈ ಅಕೌಂಟ್‌ನಿಂದ ಯುವತಿಯ ರೀತಿಯಲ್ಲೇ ಸಿದ್ಧಾರ್ಥನಿಗೆ ಮಸೇಜ್‌ ಮಾಡಿದ್ದ. ಸಿದ್ಧಾರ್ಥ ಕೂಡ ಯುವತಿ ಎಂದು ತಿಳಿದು ಕೆಲ ದಿನಗಳು ಚಾಟಿಂಗ್‌ ಮಾಡಿದ್ದ.

ಈ ನಡುವೆ ಇದು ಫೇಕ್ ಎಂದು ತಿಳಿದು, ಯಾಕೆ ಮೆಸೇಜ್ ಮಾಡುತ್ತಿದ್ದೀಯಾ ಎಂದು ಸಿದ್ಧಾರ್ಥ್ ಪ್ರಶ್ನೆ ಮಾಡಿದ್ದ. ಈ ವೇಳೆ ಚೇತನ್‌ ಭೇಟಿ ಮಾಡುವಂತೆ ಹೇಳಿ ಕರೆಸಿಕೊಂಡಿದ್ದಾನೆ. ತನ್ನ ಸಹಚರರನ್ನು ಜತೆಯಾಗಿ ಕರೆದುಕೊಂಡು ಬಂದಿದ್ದ ಚೇತನ್ ಮೊದಲೆ ಪ್ಲ್ಯಾನ್ ಮಾಡಿ ಚಾಕು ತಂದಿದ್ದ. ಇಬ್ಬರ ಭೇಟಿ ವೇಳೆ ಮಾತಿನ ಚಕಮಕಿ ನಡೆದಿದ್ದು, ಮಾತನಾಡುತ್ತಲೇ ಸಿದ್ಧಾರ್ಥ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: Tiger, leopard died: ಕೆರೆಗೆ ಬಿದ್ದು ಹುಲಿ, ಉರುಳಿಗೆ ಸಿಲುಕಿ‌ ಚಿರತೆ ಸಾವು

ಬಳಿಕ ಚೇತನ್‌ ಚಾಕುವಿನಿಂದ ಸಿದ್ಧಾರ್ಥ್ ತೊಡೆಗೆ ಇರಿದಿದ್ದಾನೆ. ನಂತರ ನಡು ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದವನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿದ್ಧಾರ್ಥ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

Exit mobile version