Site icon Vistara News

Rain News : ಹೊಸನಗರದ ಮಾಣಿಯಲ್ಲಿ ಒಂದೇ ದಿನ 14 ಸೆಂ.ಮೀ. ಮಳೆ! ತುಂಬಿತು ತುಂಗಾ ಜಲಾಶಯ

Frog in Rain

ಶಿವಮೊಗ್ಗ/ ಹೊಸನಗರ: ರಾಜ್ಯದಲ್ಲೇ ಅತ್ಯಧಿಕ ಮಳೆ ಬೀಳುವ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಮಳೆರಾಯ (Rain News) ಅಬ್ಬರಿಸುತ್ತಿದ್ದಾನೆ. ಮಳೆ ಬಿರುಸುಗೊಂಡಿರುವುದರಿಂದ ಕೃಷಿ ಚಟುವಟಿಕೆ (Agricultural Activity) ಚುರುಕುಗೊಂಡಿದೆ. ಭತ್ತ ನಾಟಿ ಮಾಡಲು ಸಸಿ ಮಡಿ ಸಿದ್ಧಪಡಿಸುವುದು, ಗೊಬ್ಬರ ಹಾಕುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ತುಂಗಾ ಜಲಾಶಯ (Tunga reservoir) ಸಹ ತುಂಬಿದೆ.

ಹೊಸನಗರ ತಾಲೂಕಿನ ಮಾಣಿಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ 142 ಮಿಲಿ ಮೀಟರ್ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದಂತೆ ಹುಲಿಕಲ್ಲಿನಲ್ಲಿ 127, ಸಾವೆಹಕ್ಲುವಿನಲ್ಲಿ 120, ಚಕ್ರಾನಗರದಲ್ಲಿ 118, ಮಾಸ್ತಿಕಟ್ಟೆಯಲ್ಲಿ 116, ಯಡೂರಿನಲ್ಲಿ 100, ನಗರದಲ್ಲಿ 87 ಮತ್ತು ಹೊಸನಗರದಲ್ಲಿ 48 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮೂಲಕ ಈ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ.

ಹೊಸನಗರದಲ್ಲಿರುವ ಶರಾವತಿ ಹಿನ್ನೀರು ಪ್ರದೇಶ

1819 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1742.65 ಅಡಿ ತಲುಪಿದೆ. ಕಳೆದ ವರ್ಷಕ್ಕಿಂತ 20 ಅಡಿ ನೀರು ಸಂಗ್ರಹ ಕಡಿಮೆ ಇದೆ. ಜಲಾಶಯಕ್ಕೆ 9237 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಇದನ್ನೂ ಓದಿ: Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ

ಭರ್ತಿಯತ್ತ ತುಂಗಾ ಜಲಾಶಯ

ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಚುರುಕುಗೊಂಡಿದ್ದು, ಎಲ್ಲ ಕಡೆ ವ್ಯಾಪಕವಾಗಿ ಸುರಿಯುತ್ತಿದೆ. ತುಂಗಾ ಜಲಾಶಯದಲ್ಲಿ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದೆ. ಮಳೆ ಹೀಗೇ ಮುಂದುವರಿದಲ್ಲಿ ಯಾವುದೇ ಕ್ಷಣದಲ್ಲಿ ನೀರು ಬಿಡುವ ಸಾಧ್ಯತೆ ಇದೆ. ಒಟ್ಟಾರೆ ಸಾಮರ್ಥ್ಯ 588.24 ಮೀಟರ್‌ ಇದ್ದು, ಬುಧವಾರ (ಜುಲೈ 7) 587.54 ಮೀಟರ್‌ ಇದೆ. ಅಂದರೆ ಜಲಾಶಯ ತುಂಬಲು ಇನ್ನು ಭಾಗಶಃ ಮುಕ್ಕಾಲು ಮೀಟರ್‌ ನೀರು ಬಂದರೆ ಸಾಕು.

ಹೀಗಾಗಿ ತುಂಗಾ ಮೇಲ್ದಂಡೆ ಯೋಜನೆ ವಿಭಾಗವು ಮುನ್ನೆಚ್ಚರಿಕೆ ನೀಡಿದ್ದು, ನದಿಪಾತ್ರದಲ್ಲಿ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಯನ್ನು ಮಾಡದಂತೆ ಎಚ್ಚರಿಕೆ ನೀಡಿದೆ. ದನ-ಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡಬಾರದು, ಅಪಾಯದ ಸ್ಥಳದಲ್ಲಿದ್ದವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಜಲಾಶಯದ

Exit mobile version