ಬೆಂಗಳೂರು: ಹಿರಿಯ ಸಾಹಿತಿ ಮಂಜುನಾಥ ಅಜ್ಜಂಪುರ ವಿರಚಿತ “ನಿಜ-ಇತಿಹಾಸದೊಂದಿಗೆ ಮುಖಾಮುಖಿ”
ಅಂಕಣ ಸಂಕಲನವನ್ನು (Book Release) ಮನು-ಮನೆ ಪ್ರಕಾಶನವು ಹೊರತಂದಿದ್ದು, ಮಾರ್ಚ್ 19ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಲೋಕಾರ್ಪಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ನಾಡೋಜ, ಪತ್ರಕರ್ತ ಡಾ. ಎಸ್.ಆರ್.ರಾಮಸ್ವಾಮಿ, ವಿದುಷಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಸ್.ಆರ್.ಲೀಲಾ, ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Hallmark: ಹಾಲ್‌ಮಾರ್ಕ್ ಇಲ್ಲದ ಆಭರಣ ಮಾರಾಟ ಮುಂದಿನ ತಿಂಗಳಿನಿಂದ ನಿಷೇಧ
ಚಿಂತಕ, ವಿಮರ್ಶಕ ಡಾ. ಜಿ.ಬಿ. ಹರೀಶ್ ಗ್ರಂಥ ಪರಿಚಯ ಮಾಡಿಕೊಡಲಿದ್ದು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ, ಲೋಕಾರ್ಪಣೆಗೊಳ್ಳುತ್ತಿರುವ “ನಿಜ-ಇತಿಹಾಸದೊಂದಿಗೆ ಮುಖಾಮುಖಿ” ಸಂಕಲನವು ರಿಯಾಯಿತಿ ದರದಲ್ಲಿ ಮಾರಾಟವಿದೆ.