ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಹು ಜನಪ್ರಿಯ ಮಾಸಿಕ ಕಾರ್ಯಕ್ರಮ ʻಮನ್ ಕಿ ಬಾತ್ʼನ (Mann Ki Baat) 102ನೇ ಸಂಚಿಕೆ ಭಾನುವಾರ (ಜೂನ್ 18) ಪ್ರಸಾರಗೊಂಡಿದೆ. ಇದೇ ಸಂದರ್ಭವನ್ನು ಬಳಸಿಕೊಂಡಿರುವ ರಾಜ್ಯದ ಕಾಂಗ್ರೆಸ್ ನಾಯಕ, ಸಚಿವ ದಿನೇಶ್ ಗುಂಡೂ ರಾವ್ (Dinesh Gundu Rao) ಅನ್ನ ಭಾಗ್ಯ ಅಕ್ಕಿಯನ್ನು ಮುಂದಿಟ್ಟು ಕಾಲೆಳೆದಿದ್ದಾರೆ.
ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿರುವ ದಿನೇಶ್ ಗುಂಡೂ ರಾವ್, ಕರ್ನಾಟಕದ ಬಡವರಿಗೆ ಯಾಕೆ ಅಕ್ಕಿ ಕೊಡಲ್ಲ ಅಂತ ಮನ್‌ಕಿ ಬಾತ್‌ನಲ್ಲಿ ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ದಿನೇಶ್ ಗುಂಡೂ ರಾವ್ ಟ್ವೀಟ್‌ನಲ್ಲಿ ಏನೇನಿದೆ?
- ಇಂದು ಮೋದಿಯವರ 102ನೇ ಸಂಚಿಕೆಯ #MannKiBaat. ಇತ್ತೀಚಿನ ವರದಿಗಳ ಪ್ರಕಾರ ಮೋದಿಯವರ ಅಂಧ ಭಕ್ತರೂ ಮನ್ ಕಿ ಬಾತ್ ಕೇಳುತ್ತಿಲ್ಲ. ಆದರೂ ಮೋದಿಯವರು ಛಲ ಬಿಡದ ತ್ರಿವಿಕ್ರಮನಂತೆ ಮನ್ ಕಿ ಬಾತ್ ಮಾಡುತ್ತಲೇ ಇದ್ದಾರೆ. ಮೋದಿಯವರೇ, ಇಂದಿನ ಮನ್ ಕಿ ಬಾತ್‌ನಲ್ಲಾದರೂ ಚರ್ವಿತ ಚರ್ವಣದಂತೆ ಹೇಳಿದನ್ನೇ ಹೇಳುವುದ ಬಿಟ್ಟು ಹೊಸದೇನಾದರೂ ಹೇಳುವಿರಾ?
1
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 18, 2023
ಇಂದು ಮೋದಿಯವರ 102ನೇ ಸಂಚಿಕೆಯ #MannKiBaat.
ಇತ್ತೀಚಿನ ವರದಿಗಳ ಪ್ರಕಾರ ಮೋದಿಯವರ ಅಂಧ ಭಕ್ತರೂ ಮನ್ ಕಿ ಬಾತ್ ಕೇಳುತ್ತಿಲ್ಲ.
ಆದರೂ ಮೋದಿಯವರು ಛಲ ಬಿಡದ ತ್ರಿವಿಕ್ರಮನಂತೆ ಮನ್ ಕಿ ಬಾತ್ ಮಾಡುತ್ತಲೇ ಇದ್ದಾರೆ.
ಮೋದಿಯವರೇ, ಇಂದಿನ ಮನ್ ಕಿ ಬಾತ್‌ನಲ್ಲಾದರೂ ಚರ್ವಿತ ಚರ್ವಣದಂತೆ ಹೇಳಿದನ್ನೇ ಹೇಳುವುದ ಬಿಟ್ಟು ಹೊಸದೇನಾದರೂ ಹೇಳುವಿರಾ?
2. ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಬಗ್ಗೆ ಅನೇಕ ನಿರೀಕ್ಷೆಗಳಿವೆ. ಇಂದು ನಿಮ್ಮ ಮನದಾಳದ ಮಾತಿನಲ್ಲಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತಾಡುವಿರೆ? ಮಹಿಳಾ ಕುಸ್ತಿಪಟುಗಳ ಮೇಲೆ ನಿಮ್ಮ ಪಕ್ಷದ ಸಂಸದ ಎಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತಾಡುವಿರೆ? ಚೀನಾ ಮತ್ತು ಭಾರತದ ಗಡಿ ಸಂಘರ್ಷದ ಬಗ್ಗೆ ದೇಶದ ಜನರೆದುರು ಸತ್ಯ ಮಾತಾಡುವಿರೆ?
3 ಮೋದಿಯವರೇ, ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲು ಒಪ್ಪಿ ನಂತರ ನಿರಾಕರಿಸಿದ ಬಗ್ಗೆ #MannKiBaat ನಲ್ಲಿ ಮಾತಾಡುವಿರೆ? ಬಡವರಿಗೆ ಸಿಗಬೇಕಾಗಿದ್ದ ಅಕ್ಕಿಯನ್ನು ಹೆಂಡ ತಯಾರಿಸಲು ಬೇಕಾದ ಎಥೆನಾಲ್ ಉತ್ಪಾದನೆಗೆ ಕೊಟ್ಟಿದ್ಯಾಕೆ ಎಂಬ ಬಗ್ಗೆ ಮಾತಾಡುವಿರೆ? ನೀವು ಇಲ್ಲಿಯವರೆಗೂ ಕೊಟ್ಟ ಆಶ್ವಾಸನೆಗಳು ಎಷ್ಟು ಈಡೇರಿದೆ ಎಂಬ ಬಗ್ಗೆ ಮಾತಾಡುವಿರೆ?
4 ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಸತ್ಯ ಹಾಗೂ ವಾಸ್ತವದ ಅನಾವರಣವಾಗಿರಲಿ. ಸತ್ಯ ಹೇಳುವ ಮೂಲಕ ಈ ಮನ್ ಕಿ ಬಾತ್ ವಿಶಿಷ್ಟ ವಿಭಿನ್ನವಾಗಿರಲಿ. ಮೋದಿಯವರೆ ಸತ್ಯ ಮಾತಾಡಲು ಹೃದಯ ಶುದ್ಧಿಯಿರಬೇಕು ಹಾಗೂ ಮನಸ್ಸು ಕಲ್ಮಶ ರಹಿತವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು. ಇಂದಾದರೂ ನಾವು ನಿಮ್ಮಿಂದ ಸತ್ಯ ನಿರೀಕ್ಷಿಸಬಹುದೇ?
4
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 18, 2023
ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಸತ್ಯ ಹಾಗೂ ವಾಸ್ತವದ ಅನಾವರಣವಾಗಿರಲಿ. ಸತ್ಯ ಹೇಳುವ ಮೂಲಕ ಈ ಮನ್ ಕಿ ಬಾತ್ ವಿಶಿಷ್ಟ ವಿಭಿನ್ನವಾಗಿರಲಿ.
ಮೋದಿಯವರೆ ಸತ್ಯ ಮಾತಾಡಲು ಹೃದಯ ಶುದ್ಧಿಯಿರಬೇಕು ಹಾಗೂ ಮನಸ್ಸು ಕಲ್ಮಶ ರಹಿತವಾಗಿರಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು.
ಇಂದಾದರೂ ನಾವು ನಿಮ್ಮಿಂದ ಸತ್ಯ ನಿರೀಕ್ಷಿಸಬಹುದೇ?
ಮೋದಿ ಅಭಿಮಾನಿಗಳಿಂದ ತಿರುಗೇಟು
ದಿನೇಶ್ ಗುಂಡೂ ರಾವ್ ಅವರು ಮೋದಿ ಅವರನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರೆ ಇತ್ತ ಮೋದಿ ಅವರ ಅಭಿಮಾನಿಗಳು ಟ್ವಿಟರ್‌ನಲ್ಲೇ ದಿನೇಶ್ ಗುಂಡೂರಾವ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೋದಿ ಅವರು ರಾಹುಲ್ ಗಾಂಧಿ ರೀತಿ ಸುಳ್ಳು ಹೇಳಲ್ಲ ಬಿಡಿ. ನಿಮ್ಮ ಪಕ್ಷ, ಸಿದ್ದರಾಮಯ್ಯಗಿಂತ ಯಾರಾದರು ದೊಡ್ಡ ಸುಳ್ಳುಗಾರರು ಇದಾರಾ ಈ ಜಗತ್ತಿನಲ್ಲಿ ಕಳೆದ ಹತ್ತು ವರ್ಷದಿಂದ ಮೋದಿ ದ್ವೇಷ ತುಂಬಿಕೊಂಡಿರುವ ನಿಮಗೆ ಯಾವ ನೈತಿಕತೆ ಇದೆ ಹೃದಯವೈಶಾಲ್ಯತೆ ಬಗ್ಗೆ ಮಾತನಾಡುವುದಕ್ಕೆಧೈರ್ಯ ಯಾರಿಗೆ ಬೇಕು. ನಿಮ್ಮ ಸಿದ್ರಾಮಯ್ಯಗೆ ಇಲ್ವಾ ರಾಹುಲ್‌ಗೆ ಇಲ್ವಾ? ಎಂದು ಒಬ್ಬ ನೆಟ್ಟಿಗರು ಕೇಳಿದ್ದಾರೆ.
ʻʻನೀವು ಕೇಳಬೇಡಿ ಬುಡ್ರಿ ಗುಂಡೂರಾಯರೇ. ಯಾರು ಕೇಳಬೇಕೋ ಅವರು ಕೇಳ್ತಾರೆ. ನೀವು ಕೇಳಲಿಲ್ಲ ಅಂದ ಮಾತ್ರಕ್ಕೆ ಬೇರೆ ಜನ ಕೇಳಲ್ಲ ಅನ್ನೋದು ನಿಮ್ಮ ಮೂರ್ಖತನ. ನೋವು ನಿಮ್ಮ ನಕಲಿ ಗಾಂಧಿ ಮಾತನ್ನ ಗುಲಾಮರ ರೀತಿ ನೀವು ಕೇಳೊಕೊಳ್ಳಿ, ಜನ, ದೇಶದ ಹಿತ ಚಿಂತನೆ ಹಚ್ಚಿಸುವ #ಮನ್_ಕಿ_ಬಾತ್ ಬಗ್ಗೆ ನಿಮಗ್ಯಾಕೆ ಉರಿ. 2024ರಿಂದ ನಿಮ್ಮ ರೋಗ ಇದೆ ಅಂತ ಗೊತ್ತುʼʼ ಎಂದು ಹೇಳಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ: Mann Ki Baat Live Updates: ಮೋದಿ ಮನ್ ಕೀ ಬಾತ್; ಎಲ್ಲರೂ ಯೋಗ ಮಾಡಿ ಎಂದು ಪ್ರಧಾನಿ ಕರೆ