Site icon Vistara News

ಸುರತ್ಕಲ್‌ನಲ್ಲಿ ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

Suicide Case

ಮಂಗಳೂರು: ಇಲ್ಲಿನ ಸುರತ್ಕಲ್‌ನ ಬಾಳ ಗ್ರಾಮದಲ್ಲಿ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಾಳ ಗ್ರಾಮದ ನಿವಾಸಿ‌ ದಿವ್ಯಾ (26) ಮೃತ ದುರ್ದೈವಿ.

ದಿವ್ಯಾ ಹಾಗೂ ಪತಿ ಹರೀಶ್‌ ನೆರೆ ಮನೆಯ ಕಾರ್ಯಕ್ರಮ ಒಂದಕ್ಕೆ ಹೋಗಿದ್ದರು. ವಾಪಸ್‌ ಒಬ್ಬರೇ ಮನೆಗೆ ಬಂದಿದ್ದ ದಿವ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪತಿ ಹರೀಶ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರೀತಿಸಿ ಮದುವೆ ಆಗಿದ್ದ ದಂಪತಿ

ವರ್ಷದ ಹಿಂದೆ ಹರೀಶ್‌ ಹಾಗೂ ದಿವ್ಯಾ ಪ್ರೀತಿಸಿ ಮದುವೆಯಾಗಿದ್ದರು. ಹರೀಶ್‌ ಆಟೋ ಚಾಲಕರಾಗಿದ್ದರೆ ದಿವ್ಯಾ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ದಿವ್ಯಾ ಸಾವಿನ ಕುರಿತು ತನಿಖೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Tiger Attack: ಮೈಸೂರಲ್ಲಿ ಚಿರತೆ ದಾಳಿಗೆ ಬಾಲಕ ಮೃತ್ಯು ಬೆನ್ನಲ್ಲೇ ಹುಲಿ ದಾಳಿಗೆ ಯುವಕ ಬಲಿ; ಒಂದೇ ದಿನದ ಅಂತರದಲ್ಲಿ 2 ಸಾವು

Exit mobile version