ಹಾಸನ: ಅನೈತಿಕ ಸಂಬಂಧ ಬೆಳೆಸುವಂತೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದರಿಂದ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ (Hassan News) ರಾಜಕುಮಾರ್ ನಗರ ಬಡಾವಣೆಯಲ್ಲಿ ನಡೆದಿದೆ. ಮನೆಮಂದಿಯೆಲ್ಲಾ ನಮಾಜ್‌ಗೆ ಹೋಗಿದ್ದಾಗ ಮನೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಬನಮ್ ಸುಲ್ತಾನ್ (30) ಆತ್ಮಹತ್ಯೆಗೆ ಶರಣಾದ ಮಹಿಳೆ. ಇರ್ಫಾನ್ ಎಂಬುವವರ ಜತೆ 12 ವರ್ಷದ ಹಿಂದೆ ಶಬನಮ್ ಸುಲ್ತಾನ್‌ಗೆ ಮದುವೆ ಆಗಿತ್ತು. ಅದರೆ, ಇಸ್ಮಾಯಿಲ್ ಶರೀಫ್ ಎಂಬಾತನ ಪೀತಿಯ ಬಲೆಗೆ ಬಿದ್ದು, ಆತನ ಜತೆ ಎರಡು ತಿಂಗಳ ಹಿಂದೆ ಶಬನಮ್ ಓಡಿಹೋಗಿದ್ದಳು. ಆದರೆ, ಮನೆಯವರು ರಾಜಿ ಮಾಡಿ ಮನೆಗೆ ಕರೆತಂದಿದ್ದರು ಎನ್ನಲಾಗಿದೆ.
ಒಂದು ತಿಂಗಳ ಬಳಿಕ ಮಹಿಳೆ ಮನೆಗೆ ವಾಪಸ್ ಬಂದಿದ್ದಳು. ಆದರೆ, ನಂತರವೂ ಇಸ್ಮಾಯಿಲ್ ಶರೀಫ್ ಅದೇ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪತ್ನಿಯನ್ನು ಸೀಮೆ ಎಣ್ಣೆ ಸುರಿದು ಕೊಂದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ
ಬಸವಕಲ್ಯಾಣ (ಬೀದರ್): ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಲ್ಲದೆ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ (Murder Case) ಗಂಡನಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ (Life Imprisonment) ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತಾಲೂಕಿನ ಯದಲಾಪೂರ ಗ್ರಾಮದ ನಿವಾಸಿ ತುಕಾರಾಮ ರೆಡ್ಡಿ ಟೊಣ್ಣೆ (52) ಶಿಕ್ಷೆಗೆ ಗುರಿಯಾದ ವ್ಯಕ್ತಿ. 2014ರಲ್ಲಿ ಸಿರ್ಸಿ ಔರಾದನ ಪೂಜಾ ಎಂಬವರನ್ನು ಈತ ಮದುವೆಯಾಗಿದ್ದ. ಮದುವೆಯಾದ ದಿನದಿಂದಲೇ ಪತ್ನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದ. ಎರಡು ವರ್ಷ ಕಳೆಯುವಷ್ಟರಲ್ಲಿ ಆತನ ಕ್ರೌರ್ಯ ಯಾವ ಮಟ್ಟಿಗೆ ಹೆಚ್ಚಿತ್ತೆಂದರೆ ಕೊನೆಗೆ ಆತ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಿಪಿಐ ಶಿವನಗೌಡ ಪಾಟೀಲ್ ಅವರು ಪ್ರಕರಣದ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: Murder Case : ಮತ್ತೊಬ್ಬಳನ್ನು ಮೋಹಿಸಿದ; ಸರ್ಕಾರಿ ನೌಕರಿ ಆಸೆಗೆ ಬಿದ್ದು ಪತ್ನಿಯನ್ನೇ ಕೊಂದ!
ಪ್ರಕರಣ ಕುರಿತು ವಿಚಾರಣೆ ನಡೆಸಿದ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಘವೇಂದ್ರ ಚನ್ನಬಸಪ್ಪ ಅವರು ಆರೋಪಿತನಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ 2.56 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಬಸವಂತ ರೆಡ್ಡಿ ವಾದ ಮಂಡಿಸಿದ್ದು, ಮೃತ ಮಹಿಳೆಗೆ ನ್ಯಾಯ ಒದಗಿಸುವಲ್ಲಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.