Site icon Vistara News

Martin Movie: ಬಹುನೀರಿಕ್ಷಿತ ʼಮಾರ್ಟಿನ್ʼ ರಿಲೀಸ್ ಡೇಟ್ ಫಿಕ್ಸ್‌; 3 ವರ್ಷಗಳ ನಂತರ ತೆರೆಗೆ ಆ್ಯಕ್ಷನ್ ಪ್ರಿನ್ಸ್ ಎಂಟ್ರಿ

Martin Movie

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನೀರಿಕ್ಷಿತ ʼಮಾರ್ಟಿನ್ʼ ಚಿತ್ರದ ರಿಲೀಸ್ ಡೇಟ್ ಫಿಕ್ಸ್‌ ಆಗಿದೆ. ಎ.ಪಿ. ಅರ್ಜುನ್ ನಿರ್ದೇಶನದ ʼಮಾರ್ಟಿನ್ʼ (Martin Movie) ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಅಕ್ಟೋಬರ್‌ 11ಕ್ಕೆ ತೆರೆಗೆ ಅಪ್ಪಲಿಸಲಿದೆ.

ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಬಂದ್‌ ಆಗಲಿವೆ ಎಂಬ ಸುದ್ದಿ ಹರಿದಾಡುತ್ತಿರುವ ನಡುವೆ ‘ಮಾರ್ಟಿನ್’ ಚಿತ್ರತಂಡ ಬಿಗ್ ಅನೌನ್ಸ್‌ಮೆಂಟ್ ಮಾಡಿದೆ. ಈ ಚಿತ್ರವು ಆ್ಯಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 5ನೇ ಚಿತ್ರವಾಗಿದ್ದು, ಉದಯ್ ಕೆ.ಮೆಹ್ತಾ ಈ ಅದ್ಧೂರಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸುಮಾರು ದಿನಗಳಿಂದ ಸಿ.ಜಿ ಕೆಲಸಗಳಲ್ಲಿ ನಿರತವಾಗಿದ್ದ ಮಾರ್ಟಿನ್ ಚಿತ್ರತಂಡ, ಇದೀಗ ರಿಲೀಸ್‌ ದಿನಾಂಕ ಘೋಷಣೆ ಮಾಡಿದೆ. ಪೊಗರು ಚಿತ್ರದ ಬಳಿಕ 3 ವರ್ಷಗಳ ನಂತರ ಧ್ರುವ ಸರ್ಜಾ ತೆರೆಗೆ ಎಂಟ್ರಿ ನೀಡುತ್ತಿದ್ದು, ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ನಿರ್ದೇಶಕ ಎ.ಪಿ.ಅರ್ಜುನ್ ಮಾತನಾಡಿ, ರಿಲೀಸ್ ಯಾವಾಗ? ಯಾವಾಗ? ಅಂತ ಅಭಿಮಾನಿಗಳು ಕೇಳುತ್ತಿದ್ದರು. ಇದೀಗ ಫೈನಲ್‌ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದೇವೆ. ಅಕ್ಟೋಬರ್ 11ಕ್ಕೆ‌ ನಿಮ್ಮ ಮುಂದೆ ಬರುತ್ತೇವೆ. ನಾನು ಮಾತನಾಡಲ್ಲ, ನಮ್ಮ ಸಿನಿಮಾ ಮಾತನಾಡುತ್ತೆ. ಏನೇ ಸಮಸ್ಯೆ ಬಂದರೂ‌ ಒದ್ದಾಡಿ, ಗುದ್ಡಾಡಿ ಕೊನಗೂ ಸಿನಿಮಾ ಮುಗಿಸಿದ್ದೇವೆ. ತಮಿಳುನಾಡು, ಹೈದರಾಬಾದ್, ಕೇರಳ, ಮುಂಬೈಗೆ ಹೋಗಿ ಪ್ರಮೋಷನ್ ಮಾಡಲಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ. ನನ್ನ ಎಲ್ಲಾ ಸಿನಿಮಾಗಳನ್ನು ಮಗು ಥರ ಟ್ರೀಟ್ ಮಾಡ್ತೀನಿ, ಮಾರ್ಟಿನ್ ಆರನೇ ಸಿನಿಮಾ. ನನ್ನ ಪಾಲಿಗೆ ಇದು ಆರನೇ ಮಗು ಎಂದು ಹೇಳಿದರು.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Crew on OTT: ಈ 5 ಕಾರಣಕ್ಕಾಗಿ ಟಬು, ಕರೀನಾ ನಟಿಸಿರುವ ʼಕ್ರ್ಯೂʼ ಸಿನಿಮಾ ನೋಡಬಹುದು

ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡಿರುವ ಸಿನಿಮಾ ‘ಮಾರ್ಟಿನ್ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಧ್ರುವ ಬ್ಯುಸಿ

ನಿರ್ದೇಶಕ ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು.ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಧ್ರುವ ಸರ್ಜಾ ರೈನಾ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಮಾಸ್ ಲುಕ್‌ನಲ್ಲಿ ಧ್ರುವ ಸರ್ಜಾ ಕಂಡಿದ್ದಾರೆ. ಶಿವಾರ್ಜುನ್ ನಿರ್ದೇಶನ ಹಾಗೂ ಉದಯ ಮೆಹ್ತಾ ನಿರ್ಮಾಣ ಈ ಚಿತ್ರಕ್ಕಿದೆ.

Exit mobile version