Site icon Vistara News

Coronavirus | BMTCಯಲ್ಲಿ ಡ್ರೈವರ್‌, ಕಂಡಕ್ಟರ್‌, ಪ್ರಯಾಣಿಕರಿಗೆ ಮಾಸ್ಕ್‌ ಕಡ್ಡಾಯ: ಕೆಎಸ್ಸಾರ್ಟಿಸಿಗೂ ಬರುತ್ತಾ?

coronavirus

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹರಡದಂತೆ ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದರಲ್ಲಿ ಮುಖ್ಯವಾಗಿ ಪತ್ತೆ ಹಚ್ಚು, ಪರೀಕ್ಷಿಸು ಮತ್ತು ಚಿಕಿತ್ಸೆ ನೀಡು (Track, Test, treat) ಎನ್ನುವ ಮೂಲ ಪ್ರಕ್ರಿಯೆಗಳನ್ನು ನಡೆಸಲು ಮುಂದಾಗಿದೆ. ಇದರ ಜತೆಗೆ ಜನರು ಅನುಸರಿಸಬೇಕಾದ ಕೆಲವೊಂದು ಪ್ರಮುಖ ಮಾರ್ಗಸೂಚಿಗಳನ್ನು ಸರ್ಕಾರ ಶನಿವಾರ ಬಿಡುಗಡೆ ಮಾಡಲಿದೆ.

ಈಗಾಗಲೇ ಒಳಾಂಗಣದಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ, ಹೊರಗೂ ಹಾಕುವಂತೆ ಸೂಚಿಸಲಾಗಿದೆ. ಈ ನಡುವೆ ಬಿಎಂಟಿಸಿ ಒಂದು ಹೆಜ್ಜೆ ಮುಂದೆ ಹೋಗಿ ಬಸ್‌ ಸಂಚಾರಕ್ಕೆ ಮಾಸ್ಕ್‌ ಕಡ್ಡಾಯ ಎಂದು ಪ್ರಕಟಿಸಿದೆ.

ಬಿಎಂಟಿಸಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದ್ದು, ಬಸ್ ನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಹಾಕುವಂತೆ ಸುತ್ತೋಲೆ ಹೊರಡಿಸಲಾಗಿದೆ. ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಈ ಸೂಚನೆ ನೀಡಲಾಗಿದೆ.

ಡ್ರೈವರ್ ಹಾಗು ಕಂಡಕ್ಟರ್ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಎಲ್ಲ ವರ್ಗದ ಸಿಬ್ಬಂದಿ ಹಾಗು ಅಧಿಕಾರಿಗಳು ಮಾಸ್ಕ್ ಧರಿಸಬೇಕು, ಪ್ರಯಾಣಿಕರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.

ಬಿಎಂಟಿಸಿ ಮಾಸ್ಕ್‌ ಕಡ್ಡಾಯ ಮಾಡಿರುವುದರಿಂದ ಮುಂದಿನ ಕೆಲವೇ ದಿನದಲ್ಲಿ ಕೆಎಸ್ಸಾರ್ಟಿಸಿ ಬಸ್‌ನಲ್ಲೂ ಮಾಸ್ಕ್‌ ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Coronavirus | ಡಿ.27ರಂದು ಆಸ್ಪತ್ರೆಗಳಲ್ಲಿ ಕೊರೊನಾ ಕುರಿತ ಆರೋಗ್ಯ ಸೇವೆಗಳ ಮಾಕ್‌ ಡ್ರಿಲ್‌: ಸಚಿವ ಡಾ.ಕೆ. ಸುಧಾಕರ್‌

Exit mobile version