1. ಮಾಸ್ಕ್ ಎಲ್ಲರಿಗೂ ಕಡ್ಡಾಯವಲ್ಲ, ಹೊಸ ವರ್ಷಾಚರಣೆಗೆ ಅಡ್ಡಿ ಇಲ್ಲ
ಬೆಂಗಳೂರು: ಹಿಂದಿನ ಕೊರೊನಾ ವೈರಸ್ (Corona virus news) ಮತ್ತು ಈಗ ಪತ್ತೆಯಾಗಿರುವ ಕೋವಿಡ್ ಉಪತಳಿ JN.1 (Covid Subvariant JN1) ಅಪಾಯಕಾರಿಯಲ್ಲ. ಹೀಗಾಗಿ ಯಾರೂ ಭಯಪಡಬೇಕಾಗಿಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿ ಎಂದು ಸಿಎಂ ಸಿದ್ದರಾಮಯ್ಯ (CM siddaramaiah) ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ (Mask is not Compulsary) ಮತ್ತು ಹೊಸ ವರ್ಷಾಚರಣೆಗೆ (New year Celebration) ಏನೂ ಅಡ್ಡಿ ಇಲ್ಲ, ಶಾಲೆಗೆ ಹೋಗುವ ಮಕ್ಕಳು ಮಾಸ್ಕ್ ಧರಿಸಿಕೊಂಡು ಹೋಗುವುದು ಕಡ್ಡಾಯವಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ : Covid Subvariant JN.1 : ಜನವರಿಯಲ್ಲಿ ರಾಜ್ಯದಲ್ಲಿ ಕೊರೊನಾ ಸ್ಫೋಟ; ತಜ್ಞರ ಎಚ್ಚರಿಕೆ
2. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ 24+4 ಫಾರ್ಮುಲಾ? ಆ 4 ಕ್ಷೇತ್ರ ಯಾವುದು?
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಮಾತುಕತೆಯು ಮಹತ್ವದ ಘಟ್ಟವನ್ನು ತಲುಪಿದೆ. ಈಗಾಗಲೇ ಎನ್‌ಡಿಎ ಮೈತ್ರಿಕೂಟವನ್ನು (NDA alliance) ಸೇರಿರುವ ಜೆಡಿಎಸ್‌ಗೆ ಈಗ ಸೀಟು ಹಂಚಿಕೆ ಸವಾಲು ಎದುರಾಗಿದೆ. ಆದರೆ, 25+3 ಫಾರ್ಮುಲವಾ? ಇಲ್ಲವೇ 24+4 ಫಾರ್ಮುಲಾವೇ? ಎಂಬುದೇ ಈಗ ಕುತೂಹಲವನ್ನು ಹುಟ್ಟುಹಾಕಿದೆ. ಈ ಬಗ್ಗೆ ಇಂದು (ಗುರುವಾರ) ಸಂಜೆಯೊಳಗೆ ದೆಹಲಿಯಲ್ಲಿ ಅಂತಿಮ ಆಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP national president JP Nadda) ಹಾಗೂ ಗೃಹ ಸಚಿವ ಅಮಿತ್ ಶಾ ಜತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಭೆ ನಡೆಸಲಿದ್ದು, ಸೀಟು ಹಂಚಿಕೆ ಬಹುತೇಕ ಫೈನಲ್ ಆಗಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : BJP JDS Alliance: ಮೈತ್ರಿ ಸೀಟು ಹಂಚಿಕೆ; ದೇವೇಗೌಡರಿಗೆ ಮೋದಿ ಹೇಳಿದ್ದೇನು?
ಇದನ್ನೂ ಓದಿ: BJP JDS Alliance: ಲೋಕಸಭೆಗೆ ನಿಖಿಲ್ ಸ್ಪರ್ಧೆ ಇಲ್ಲವೆಂದ ಎಚ್‌ಡಿಕೆ; ಕೇಂದ್ರ ಮಂತ್ರಿ ಆಗ್ತಾರಾ ಕುಮಾರಸ್ವಾಮಿ?
3. ಉಗ್ರರ ಹೊಂಚು ದಾಳಿಯಲ್ಲಿ ಮೂವರು ಯೋಧರು ಹುತಾತ್ಮ
ಪೂಂಚ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಸೆಕ್ಟರ್‌ನ ಥಾನಮಂಡಿ ಪ್ರದೇಶದಲ್ಲಿ ಎರಡು ಸೇನಾ ವಾಹನಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ (Terrorists ambush Attack) ಮೂವರು ಯೋಧರು ಹುತಾತ್ಮರಾಗಿದ್ದಾರೆ (three Soliders Killed) ಮತ್ತು ಮೂವರು ಯೋಧರು ಗಾಯಗೊಂಡಿದ್ದಾರೆ. ಭಯೋತ್ಪಾದಕರ ದಾಳಿಗೆ ತಕ್ಷಣ ಭಾರತೀಯ ಸೇನಾ ಪಡೆಗಳು(indian army) ಪ್ರತಿದಾಳಿ ನಡೆಸಿವೆ. ನಿನ್ನೆ ಸಂಜೆಯಿಂದ ಈ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧದ ಜಂಟಿ ಕಾರ್ಯಾಚರಣೆಯಲ್ಲಿ ಸೈನಿಕರು ಕಾದಾಡುತ್ತಿದ್ದಾರೆ(encounter). 48 ರಾಷ್ಟ್ರೀಯ ರೈಫಲ್ಸ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಸೇನೆ ಹೇಳಿದೆ. ಒಂದು ತಿಂಗಳೊಳಗೆ ಈ ಪ್ರದೇಶದಲ್ಲಿ ಸೇನೆಯ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ವರದಿಗಳ ಪ್ರಕಾರ, ಹೊಂಚುದಾಳಿ ಸಂಭವಿಸಿದ ಪ್ರದೇಶಕ್ಕೆ ಹೆಚ್ಚಿನ ಪಡೆಗಳನ್ನು ರವಾನಿಸಲಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ(Terror Attack). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
4. ಡಿ. 26ರಿಂದ ಯುವನಿಧಿ ನೋಂದಣಿ ಶುರು; ಜ. 12ರಂದು ಖಾತೆಗೆ ಹಣ ಜಮೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (Yuva Nidhi Scheme) ಡಿ. 26ರಿಂದ ನೋಂದಣಿಗೆ ಚಾಲನೆ ನೀಡಲಾಗುತ್ತಿದ್ದು, ಜ. 12ರಂದು ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಯೋಗಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
5. ಡಿ.ಕೆ ಸುರೇಶ್ ಸೇರಿ ಮತ್ತೆ ಮೂವರು ಸಂಸದರು ಸಸ್ಪೆಂಡ್
ನವದೆಹಲಿ: ಲೋಕಸಭೆಯಿಂದ (Lok Sabha) ಸಂಸದರನ್ನು ಅಮಾನತು(MP Suspended) ಮಾಡುವ ಪ್ರವೃತ್ತಿಯು ಗುರುವಾರವೂ ಮುಂದುವರಿದಿದೆ. ಕರ್ನಾಟಕದ (Karnataka MP) ಕಾಂಗ್ರೆಸ್‌ನ ಏಕೈಕ ಸಂಸದ ಡಿ.ಕೆ ಸುರೇಶ್ (DK Suresh) ಸೇರಿದಂತೆ ಮೂವರು ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಬುಧವಾರ ಕೂಡ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ. ಇದರೊಂದಿಗೆ ಒಟ್ಟಾರೆ ಅಮಾನತು ಗೊಂಡ ಸಂಸದರ ಸಂಖ್ಯೆ 146 ದಾಟಿದೆ(Parliament Session). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
6. 3ನೇ ಬಾರಿಗೆ ಆಯ್ಕೆ ಖಚಿತ, ಸಂವಿಧಾನ ತಿದ್ದುಪಡಿ ಇಲ್ಲ, ಅಲ್ಪಸಂಖ್ಯಾತರಿಗೆ ಭಯವಿಲ್ಲ: ಮೋದಿ
ಹೊಸದಿಲ್ಲಿ: ತಾವು ಮೂರನೇ ಬಾರಿಗೆ ಕೇಂದ್ರದಲ್ಲಿ ತಮ್ಮ ಪಕ್ಷ ಆಡಳಿತಕ್ಕೆ ಆರಿಸಿ ಬರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ (religious minority) ತಾರತಮ್ಯಕ್ಕೆ ತುತ್ತಾದ ಭಾವನೆ ಇಲ್ಲ ಎಂದೂ ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
7. 150 ಸಭೆ, 3200 ಸಲಹೆ ಸ್ವೀಕಾರ: ಹೊಸ ಕ್ರಿಮಿನಲ್ ಕಾಯಿದೆಗಳಲ್ಲಿ ಏನು ಬದಲಾವಣೆ?
ಹೊಸದಿಲ್ಲಿ: ಭಾರತೀಯ ಅಪರಾಧ ತನಿಖೆ ಮತ್ತು ನ್ಯಾಯಾಂಗ ವಿಚಾರಣೆಯ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿರುವ ಮೂರು ಕ್ರಿಮಿನಲ್ ಕಾಯಿದೆಗಳ ವಿಧೇಯಕಗಳ ಮಂಡನೆ ಹಾಗೂ ಅಂಗೀಕಾರ ಲೋಕಸಭೆಯಲ್ಲಿ ನಡೆದಿದೆ. ಇದರ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ನಡೆಸಿದ ಸುಮಾರು 150 ಸಭೆಗಳಿವೆ. 18 ರಾಜ್ಯಗಳು, ಆರು ಕೇಂದ್ರಾಡಳಿತ ಪ್ರದೇಶಗಳ ಸಂಸದರು ಮತ್ತು ಅಧಿಕಾರಶಾಹಿಗಳಿಂದ, ಸುಪ್ರೀಂ ಕೋರ್ಟ್, 16 ಹೈಕೋರ್ಟ್‌ಗಳು, 27 ನ್ಯಾಯಾಂಗ ಅಕಾಡೆಮಿಗಳಿಂದ ಸುಮಾರು 3,200 ಸಲಹೆಗಳನ್ನು ಸ್ವೀಕರಿಸಲಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
8. ಇನ್ನು ಮುಂದೆ ಆಧಾರ್ ಕಾರ್ಡ್ ಮಾಡಿಸುವುದು ಅಷ್ಟು ಸುಲಭವಲ್ಲ! ಕಠಿಣ ನಿಯಮ
ನವದೆಹಲಿ: ಇನ್ನು ಮುಂದೆ ಮೊದಲ ಬಾರಿಗೆ ಆಧಾರ್ ಕಾರ್ಡ್ (Aadhaar Card) ಪಡೆಯಲು ಬಯಸುವ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಭೌತಿಕ ಪರಿಶೀಲನೆಗೆ (Physical verification) ಒಳಗಾಗಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI)ಯುಐಡಿಎಐ) ಹೇಳಿದೆ. ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಚಾರವನ್ನು ತಿಳಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
9. ಬ್ರಿಜ್ಭೂಷಣ್ ಬೆಂಬಲಿತ ಸಂಜಯ್ ಸಿಂಗ್ ಕುಸ್ತಿ ಒಕ್ಕೂಟದ ನೂತನ ಅಧ್ಯಕ್ಷ
ನವ ದೆಹಲಿ: ಡಿಸೆಂಬರ್ 21 ರಂದು ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅನಿತಾ ಶಿಯೋರನ್ ಅವರನ್ನು ಸೋಲಿಸಿದ ಸಂಜಯ್ ಸಿಂಗ್ ಡಬ್ಲ್ಯುಎಫ್ಐ (Wrestling Federation of India) ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ. ಸಂಜಯ್ ಸಿಂಗ್ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಕುಸ್ತಿ ಕ್ಷೇತ್ರದ ಪ್ರಭಾವಿ ವ್ಯಕ್ತಿ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬಣಕ್ಕೆ ಸೇರಿದವರು ಎಂದು ನಂಬಲಾಗಿದೆ. ಒಟ್ಟು 47 ಮತಗಳಲ್ಲಿ ಸಂಜಯ್ ಸಿಂಗ್ 40 ಮತಗಳನ್ನೂ ಪಡೆಯುವ ಮೂಲಕ ಪೂರ್ಣ ಬಹುಮತ ಪಡೆದುಕೊಂಡಿದ್ದಾರೆ. ಏತನ್ಮಧ್ಯೆ, ಶಿಯೋರನ್ ಬಣಕ್ಕೆ ಸೇರಿದ ಆರ್ಎಸ್ಪಿಬಿ ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಾಬ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: Sakshi Malik : ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್
10. ಹೊಟ್ಟೆ ನೋವೆಂದ ಮಗಳನ್ನು ರೂಮಲ್ಲಿ ಕೂಡಿಟ್ಟು ಚಿತ್ರಹಿಂಸೆ ಕೊಟ್ಟರು; ಈಗವಳಿಗೆ ಕ್ಯಾನ್ಸರ್!
ಬೆಂಗಳೂರು: ಮೌಢ್ಯಕ್ಕೆ ಬಲಿಯಾದ ಕುಟುಂಬವೊಂದು ಅನಾರೋಗ್ಯದಿಂದ ನರಳಾಡುತ್ತಿದ್ದ ಯುವತಿಯನ್ನು ಮನೆಯೊಳಗೆ ಕೂಡಿಟ್ಟ ಅಮಾನವೀಯ ಘಟನೆಯೊಂದು ನಡೆದಿದೆ. ಜ್ಯೋತಿಷಿಯ ಮಾತು (Superstitious beliefs) ಕೇಳಿ ನಾಲ್ಕು ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು, ಯುವತಿ (26) ಪ್ರಾಣದ ಜತೆ ಆಟವಾಡಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ