Site icon Vistara News

Mass murder | ಪತ್ನಿ, 4 ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಧೂರ್ತ: ಕೌಟುಂಬಿಕ ಕಲಹಕ್ಕೆ ಭಯಾನಕ ತಿರುವು

Mass murder

ಕೋಲಾರ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಂದು (Mass murder) ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಪ್ಪನ ಕೊಡಲಿಯೇಟಿಗೆ ಸಿಲುಕಿಯೂ ಜೀವ ಉಳಿಸಿಕೊಂಡಿರುವ ೯ ವರ್ಷದ ಒಬ್ಬ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಪಳನಿಸ್ವಾಮಿ ಎಂಬ ರೈತ ಈ ಭಯಾನಕ ಕೃತ್ಯವನ್ನು ನಡೆಸಿದ್ದಾನೆ. ಆತ ತನ್ನ ಪತ್ನಿ ಶ್ರೀವಲ್ಲಿ (೩೭) ಮತ್ತು ಮಕ್ಕಳಾದ ತ್ರಿಶಾ (15), ಮೋನಿಶಾ (14), ಶಿವಶಕ್ತಿ (6), ಧನುಷ್ (4) ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಭೂಮಿಕಾ (೯) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೌಟುಂಬಿಕ ಕಲಹ ತಾರಕಕ್ಕೇರಿ ಈ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇಡೀ ಸಂಸಾರವನ್ನು ನಾಶ ಮಾಡಿದ ಬಳಿಕ ಪಳನಿ ಸ್ವಾಮಿ ಕೂಡಾ ಅದೇ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೋಮವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದೆ. ಈ ಘಟನೆ ನಡೆದಿರುವುದು ತಮಿಳುನಾಡಿನ ತಿರುವಣ್ಣಾಮಲೈ ಸಮೀಪದ ಓರಂತವಾಡಿ ಗ್ರಾಮದಲ್ಲಿ. ಜೀವನ್ಮರಣ ಹೋರಾಟ ನಡೆಸುತ್ತಿರುವ ಭೂಮಿಕಾಗೆ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಿರುವಣ್ಣಾಮಲೈ ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ | Mudhol murder | ಅಪ್ಪನನ್ನು ಕೊಂದು 4 ದಿನದ ಬಳಿಕ ತಾಯಿ-ಅಣ್ಣನ ಬಳಿ ಬಾಯಿ ಬಿಟ್ಟಿದ್ದ ವಿಠಲ ಕುಳಲಿ!

Exit mobile version