ಬೆಂಗಳೂರು, ಕರ್ನಾಟಕ: ಹಾವೇರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರಗಳಲ್ಲಿ ನಟ ಸುದೀಪ್ ರೋಡ್ ಶೋ ನಡೆಸಿ, ಬಿಜೆಪಿ ಪರವಾಗಿ ಮತಯಾಚನೆ ಮಾಡಿದರು. ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ್ ಪರ ಬೆಳಗ್ಗೆ 10 ಗಂಟೆಗೆ ಪ್ರಚಾರ ಮಾಡಿದರು. ಬಳಿಕ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ ಹಾಗೂ ಬ್ಯಾಡಗಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಪರ ‘ವೀರಮದಕರಿ’ ಕ್ಯಾಂಪೇನ್ ಮಾಡಿದರು. ಈ ಮೂಲಕ 20 ಸಾವಿರಕ್ಕೂ ಹೆಚ್ಚಿರುವ ಎಸ್ ಟಿ ಮತಗಳನ್ನು ಪಡೆಯಲು ಬಿಜೆಪಿ ತಂತ್ರ ಹೆಣೆದಿತ್ತು(Karnataka Election 2023).
ಇದಕ್ಕೂ ಮೊದಲು ಅವರು ಧಾರವಾಡ ಜಿಲ್ಲೆಯ ಕುಂದಗೋಳದ ಸಂಶಿ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಸಂಶಿಯ ವಾಲ್ಮೀಕಿ ಭವನದಿಂದ ಪಕ್ಕೀರೇಶ್ವರ ಮಠದವರೆಗೆ ರೋಡ್ ಶೋ ನಡೆಯಿತು. ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ್ ಪರ ಮತಯಾಚಿಸಿದರು. ಕಿಚ್ಚನನ್ನು ನೋಡಲು ಜನರು ಮುಗಿಬಿದ್ದಿದ್ದರು.
ಇದನ್ನೂ ಓದಿ: Karnataka Election : ಪ್ರಚಾರದ ಫೀಲ್ಡಿಗಿಳಿದ ಕಿಚ್ಚ ಸುದೀಪ್; ಭರ್ಜರಿ ರೋಡ್ ಶೋ, ಹುಚ್ಚೆದ್ದು ಕುಣಿದ ಅಭಿಮಾನಿಗಳು
ಬಿ ಸಿ ಪಾಟೀಲ್ ಸ್ಪರ್ಧಿಸಿರುವ ಹಿರೇಕೆರೂರಿನಲ್ಲಿ ಸುದೀಪ್ ಅವರು ರೋಡ್ ಶೋ ನಡೆಸಿ ಮತಯಾಚಿಸಿದರು. ೧ ಗಂಟೆ ಕಾಲ ರೋಡ್ ಶೋ ನಲ್ಲಿ ಭಾಗಿಯಾದರು. “ನನ್ನ ಅಭಿವೃದ್ಧಿ ಕೆಲಸ ಹೇಳಿ ಜನರ ಬಳಿ ಮತಯಾಚನೆ ಮಾಡಿದರು. ಉಪ ಚುನಾವಣೆ ಬಳಿಕ ಈಗ ಜನರಲ್ಲಿ ಉತ್ಸಾಹ ಹೆಚ್ಚಿದೆ. ಈ ಬಾರಿ ಜನ ತುಂಬಾ ಬೆಂಬಲ ನೀಡ್ತಾರೆ. ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಪ್ರಚಾರಕ್ಕೆ ಬಂದಿದ್ದರು. ಆದ್ರೆ ಇಂದು ಕ್ಷೇತ್ರದ ಮಹಿಳೆಯರು ಉತ್ಸಾಹದಿಂದ ರೋಡ್ ಶೋನಲ್ಲಿ ಭಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವೆ. ಉಪ ಚುನಾವಣೆ ನಂತರ ಜನ ಅಭಿವೃದ್ಧಿ ಕೆಲ ಕಂಡು ಮತ ನೀಡ್ತಾರೆ ಎಂದು ಎಂದು ಬಿ ಸಿ ಪಾಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.