ಬೆಂಗಳೂರು: ವಂಶಿಕಾ ಅಂಜನಿ ಕಶ್ಯಪ.. ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರ ಮನ ಗೆದ್ದ ಪೋರಿ. ತಂದೆ ನಟ ಮಾಸ್ಟರ್ ಆನಂದ್ರಂತೆ (Master anadh) ಅರಳು ಹುರಿದಂತೆ ಮಾತನಾಡುವ ವಂಶಿಕಾ (Vanshika Anjani kashyapa) ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಸದ್ದು ಮಾಡುತ್ತಿದ್ದಾಳೆ.
ಸದ್ಯ ಬಾಲ ನಟಿ ವಂಶಿಕಾ ಹೆಸರನ್ನು ದುರುಪಯೋಗ (Fraud Case) ಮಾಡಿಕೊಳ್ಳಲಾಗುತ್ತಿದೆ ಎಂದು ತಾಯಿ ಯಶಸ್ವಿನಿ ಠಾಣೆ ಮೆಟ್ಟಿಲೇರಿದ್ದಾರೆ.
ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ, ಖಾಸಗಿ ಚಾನಲ್ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ನಿಶಾ ನರಸಪ್ಪ ಎಂಬಾಕೆ ವಂಶಿಕಾ ಹೆಸರಿನಲ್ಲಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸದಾಶಿವನಗರ ಠಾಣೆಯಲ್ಲಿ ವಂಶಿಕಾ ತಾಯಿ ಯಶಸ್ವಿನಿ ಆನಂದ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Jain Muni Murder : ಜೈನಮುನಿ ದೇಹವನ್ನು 9 ಪೀಸ್ ಮಾಡಿದ್ದು ಗುಡ್ಡಗಾಡು ಪ್ರದೇಶದಲ್ಲಿ!
ಸೋಶಿಯಲ್ ಮೀಡಿಯಾದಲ್ಲಿ ಎನ್ಎನ್ ಪ್ರೊಡಕ್ಷನ್ ಎಂಬ ಪೇಜ್ ತೆರೆದು, ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ನಿಮ್ಮ ಮಕ್ಕಳಿಗೂ ಆಲ್ಬಂನಲ್ಲಿ ಫೋಟೊ ಶೂಟ್ಗೆ ಚಾನ್ಸ್ ಕೊಡಿಸುವುದಾಗಿ ಹೇಳಿ ನೂರಾರು ಪೋಷಕರಿಗೆ ವಂಚನೆ ಮಾಡಿದ್ದಾರೆ. ನಿಶಾ ನರಸಪ್ಪಗೆ ಹಣ ಕೊಟ್ಟು ಮೋಸ ಹೋದ ಪೋಷಕರು ದೂರು ದಾಖಲಿಸಿದ್ದಾರೆ.
ಸದ್ಯ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ನಿಶಾ ನರಸಪ್ಪರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯನ್ನು ನಡೆಸಿದ್ದಾರೆ. ಜನರು ಇಂತಹವರಿಂದ ಮೋಸ ಹೋಗಿ ಹಣ ಕಳೆದುಕೊಳ್ಳದಂತೆ ವಂಶಿಕಾ ತಾಯಿ ಯಶಸ್ವಿನಿ ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ