ಬೆಂಗಳೂರು: ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದರ, ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಶ್ರೀ ನಾರಾಯಣ ಗುರು ನಿಗಮ, ಗಾಣಿಗ ಅಭಿವೃದ್ಧಿ ನಿಗಮ ಮತ್ತು ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆ ಬೆನ್ನಿಗೇ ಮೇದರ ಅಭಿವೃದ್ಧಿ ನಿಗಮ (Medara Nigama) ಸ್ಥಾಪನೆಯನ್ನು ಘೋಷಿಸಲಾಗಿದೆ.
ಆದೇಶದಲ್ಲಿ ಏನಿದೆ?
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪುವರ್ಗ1ರ ಕ್ರಮ ಸಂಖ್ಯೆ 36 (ಎ) ಯಿಂದ (ಜೆ)ವರೆಗೆ ಬರುವ ಮದರ, ಬಟ್ಟರ್, ಬರ್ನಡ, ಗೌರಿಗ, ಗೌವ್ ರಿಗ, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-1ರ ಕ್ರಮ ಸಂಖ್ಯೆ:36 (ಎ) ಯಿಂದ (ಜೆ)ವರೆಗೆ ನಮೂದಾಗಿರುವ ಮದರ,ಬಟ್ಕರ್, ಬರ್ನಡ್, ಗೌರಿಗ ಗೌವ್ ರಿಗ, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ “ಕರ್ನಾಟಕ ಮೇದರ ಅಭಿವೃದ್ಧಿ ನಿಗಮ”ವನ್ನು ಸ್ಥಾಪಿಸಿ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ : Narayanaguru Nigama : ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ; ಈಡೇರಿತು ಬಿಲ್ಲವ/ಈಡಿಗ ಸಮುದಾಯದ ಬಹುಕಾಲದ ಬೇಡಿಕೆ