Site icon Vistara News

Media Awards : ವಿಸ್ತಾರ ನ್ಯೂಸ್‌ನ ಹರಿಪ್ರಕಾಶ್‌ ಕೋಣೆಮನೆ, ರಾಮಸ್ವಾಮಿ ಹುಲಕೋಡು ಸಹಿತ 150ಕ್ಕೂ ಅಧಿಕ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Media awards

#image_title

ಬೆಂಗಳೂರು: ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಸುದ್ದಿ ಸಂಪಾದಕ ರಾಮಸ್ವಾಮಿ ಹುಲಕೋಡು ಸೇರಿದಂತೆ ನಾಡಿನ 150ಕ್ಕೂ ಅಧಿಕ ಸಾಧಕ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (Media Academy Awards) ಮತ್ತು ದತ್ತಿ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಲಾಯಿತು.

ವಿಸ್ತಾರ ನ್ಯೂಸ್‌ ಸಿಇಒ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮತ್ತು ಸುದ್ದಿಸಂಪಾದಕ ರಾಮಸ್ವಾಮಿ ಹುಲಕೋಡು

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರು 2019, 2020, 2021 ಹಾಗೂ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು 2019ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಸುದ್ದಿ ಸಂಪಾದಕ ರಾಮಸ್ವಾಮಿ ಹುಲಕೋಡು ಅವರು 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

2019ನೇ ಸಾಲಿನ ವಿಶೇಷ ಪ್ರಶಸ್ತಿಗೆ ಡೆಕ್ಕನ್‌ ಹೆರಾಲ್ಡ್‌ನ ತಿಲಕ್‌ ಕುಮಾರ್‌, 2020ನೇ ಸಾಲಿನ ವಿಶೇಷ ಪ್ರಶಸ್ತಿಗೆ ವಿಆರ್‌ಎಲ್‌ ಮೀಡಿಯಾ ಲಿಮಿಟೆಡ್‌ ಮುಖ್ಯಸ್ಥ ಡಾ. ವಿಜಯ ಸಂಕೇಶ್ವರ, 2021ನೇ ಸಾಲಿನ ವಿಶೇಷ ಪ್ರಶಸ್ತಿಗೆ ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್‌.ಆರ್‌. ರಂಗನಾಥ್‌, 2022ನೇ ಸಾಲಿನ ವಿಶೇಷ ಪ್ರಶಸ್ತಿಗೆ ಹಿರಿಯ ಆರ್ಥಿಕ ತಜ್ಞರಾದ ಸುಶೀಲ ಸುಬ್ರಹ್ಮಣ್ಯಂ ಅವರಿಗೆ ಸಂದಿದೆ. ಜೀವಮಾನ ಸಾಧನೆ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಕಂದಾಯ ಸಚಿವರಾದ ಆರ್‌. ಅಶೋಕ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಮಾಧ್ಯಮ ಪ್ರಶಸ್ತಿ ಪ್ರದಾನ

ಟಿಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು

2016: ನಾಗೇಶ್‌ ಹೆಗಡೆ, ನಿವೃತ್ತ ಸಹ ಸಂಪಾದಕರು, ಪ್ರಜಾವಾಣಿ
2017: ಧ್ರುವರಾಜ್ ವೆಂಕಟ ರಾವ್‌ ಮುತಾಲಿಕ್‌ ದೇಸಾಯಿ, (ಮರಣೋತ್ತರ-ನಿವೃತ್ತ ಸಂಪಾದಕರು, ಸಂಯುಕ್ತ ಕರ್ನಾಟಕ)
2018: ಡಿ. ಮಹದೇವಪ್ಪ, ಸಂಪಾದಕರು, ಕನ್ನಡಿಗರ ಪ್ರಜಾನುಡಿ

ಮೊಹರೆ ಹನುಮಂತರಾಯರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು

2016: ಗಂಗಾಧರ ಹಿರೇಗುತ್ತಿ, ಸಂಪಾದಕರು, ಕರಾವಳಿ ಮುಂಜಾವು
2017: ಎಸ್.ನಾಗಣ್ಣ, ಸಂಪಾದಕರು, ಪ್ರಜಾಪ್ರಗತಿ
2018: ಡಾ ಯು.ಪಿ. ಶಿವಾನಂದ, ಸಂಪಾದಕರು, ಸುದ್ದಿ ಬಿಡುಗಡೆ

ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು

2016 – ಉಗಮ ಶ್ರೀನಿವಾಸ್, ಹಿರಿಯ ಪತ್ರಕರ್ತರು, ಕನ್ನಡಪ್ರಭ

ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು

2016 – ಆನಂದ ತೀರ್ಥ ಪ್ಯಾಟಿ, ಹಿಲಿಯ ಪತ್ರಕರ್ತರು, ಕೊಪ್ಪಳ

ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ

2019 – ನೃಪತುಂಗ ದಿನಪತ್ರಿಕೆ, ಕಲಬುರಗಿ
2020 – ನಾವಿಕ ದಿನಪತ್ರಿಕೆ, ಶಿವಮೊಗ್ಗ ‌
2021 – ಸಂಜೆ ದರ್ಪಣ ದಿನಪತ್ರಿಕೆ, ಹುಬ್ಬಳ್ಳಿ
2022 – ಜಯಕಿರಣ ದಿನಪತ್ರಿಕೆ, ಮಂಗಳೂರು

ಅತ್ಯುತ್ತಮ ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ

2019 – ಬಸವರಾಜ ಹವಾಲ್ದಾರ. ಪ್ರಜಾವಾಣಿ, ಹುಬ್ಬಳ್ಳಿ
2020 – ಜೋಸೆಫ್ ಡಿಸೋಜ. ಜ್ಞಾನದೀಪ‌ ದಿನಪತ್ರಿಕೆ, ಹಾಸನ
2021- ಹರೀಶ್ ಬೇಲೂರು. ವಿಜಯವಾಣಿ, ಬೆಂಗಳೂರು
2022 – ನಜೀರ್ ಮಿಯಾನ್ ಹಟ್ಟಿ. ಸಂಜೆವಾಣಿ, ಕಲ್ಬುರ್ಗಿ

ತಳಸಮುದಾಯದ ಬಗೆಗಿನ ಬರಹಗಳಿಗೆ ನೀಡುವ ಡಾ ಬಿ‌ ಆರ್ ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ

2019: ರಾಜಶೇಖರ್. ಸಂಪಾದಕರು, ದಲಿತ ವಾಯ್ಸ್
2020: ಪ್ರೊ. ಆರ್ ಇಂದಿರಾ. ಪ್ರಾಧ್ಯಾಪಕರು, ಮೈಸೂರು ವಿವಿ
2021: ಪ್ರೊ. ಬಿ ಎಸ್ ಜಯದೇವ್‌, ಮುಖ್ಯಸ್ಥ, ದೀನಬಂಧು ಸ್ವಯಂ ಸೇವಾ ಸಂಸ್ಥೆ
2022: ಪ್ರೊ. ಮುಜಾಫರ್ ಅಸ್ಸಾದಿ. ಪ್ರಾಧ್ಯಾಪಕರು, ಮೈಸೂರು ವಿವಿ

ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ

2019: ಗಿರೀಶ್ ರಾವ್ ಹತ್ವಾರ್ (ಜೋಗಿ)
2020: ಗಣೇಶ್ ಕಾಸರಗೋಡು
2021: ರಘುನಾಥ್ ಚ ಹ
2022: ಡಾ ಶರಣು ಹುಲ್ಲೂರು

ಅತ್ಯುತ್ತಮ ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ

2019: ಚಂದ್ರಶೇಖರ ಮೋರೆ. ಉದಯವಾಣಿ, ಬಾಗಲಕೋಟೆ
2020: ಪ್ರದೀಶ್ ಎಚ್ ಮರೋಡಿ. ಪ್ರಜಾವಾಣಿ, ಮಂಗಳೂರು
2021: ತಿ.ನಾ ಪದ್ಮನಾಭ. ವಿಜಯ ಕರ್ನಾಟಕ, ರಾಮನಗರ
2022: ಶಿವಕುಮಾರ್ ವಿ. ರಾವ್. ವಿಜಯವಾಣಿ, ಮೈಸೂರು
2022: ದೀಪಕ್ ಸಾಗರ್. ವಿಜಯವಾಣಿ, ಶಿವಮೊಗ್ಗ

Exit mobile version