ತುಮಕೂರು: ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) 4 ತಿಂಗಳ ಮಗು ಬಲಿಯಾಗಿದೆ ಎಂದು ಹೆತ್ತವರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಆಯಷ್ ಮೃತಪಟ್ಟ ಮಗು.
ಕೆಂಕೆರೆ ಗ್ರಾಮದ ದಿವಾಕರ್ ಮತ್ತು ಅರುಣಾ ದಂಪತಿಯ ಮಗುವಿಗೆ ಉಸಿರಾಟಕ್ಕೆ ಕೊಂಚ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕುಣಿಗಲ್ ಪಟ್ಟಣದ ಸಪ್ತಗಿರಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಆಕ್ಸಿಜನ್ ನೀಡಿದ್ದಾರೆ. ಆದರೆ ಕೆಲವೇ ಹೊತ್ತಲ್ಲಿ ಮಗು ಉಸಿರು ಚೆಲ್ಲಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಸ್ಯಾಚುರೇಷನ್ ಕಡಿಮೆ ಇದ್ದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳ ತಜ್ಞರು ಲಭ್ಯ ಇಲ್ಲದ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಮಗುವಿನ ಆರೋಗ್ಯದಲ್ಲಿ ವ್ಯತಿರಿಕ್ತವಾಗುತ್ತಿದ್ದಂತೆ ಸಿಬ್ಬಂದಿ ಚುಂಚನಗಿರಿ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಹೇಳಿದ್ದಾರೆ. ಅಷ್ಟರಾಗಲೇ ಸಪ್ತಗಿರಿ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಲವಲವಿಕೆಯಿಂದ ಇದ್ದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿ, ಆಸ್ಪತ್ರೆ ಮುಂಭಾಗ ಪ್ರತಿಭಟಿಸಿದರು. ಮಗುವನ್ನು ಕರೆತಂದಾಗ ಸಿಬ್ಬಂದಿ ಆಕ್ಸಿಜನ್ ಮಾಸ್ಕ್ ಹಾಕಿಸಿದರು ಬಳಿಕ ಕ್ಷಣಹೊತ್ತಲೇ ಮಗು ಮೃತಪಟ್ಟಿದೆ ಎಂದು ಕಿಡಿಕಾರಿದರು. ಮಗುವಿನ ಮೃತದೇಹವನ್ನು ಹಿಡಿದುಕೊಂಡು ಗೋಳಾಡುತ್ತಿದ್ದ ದೃಶ್ಯ ಎಂತಹವರ ಕರಳು ಚುರುಕ್ ಎನ್ನುವಂತಿತ್ತು. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವಾತಾವರಣವನ್ನು ವಿಚಾರಣೆ ನಡೆಸಿ ಈ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ