Site icon Vistara News

Medical Negligence: ಸೊಂಟ ನೋವೆಂದು ಬಂದವಳು ಪ್ಯಾರಾಲಿಸಿಸ್‌ ಇಂಜೆಕ್ಷನ್‌ ಪಡೆದಳು; ಅಲ್ಲೇ ಉಸಿರು ಚೆಲ್ಲಿದಳು!

Medical Negligence woment death in karwar hospital

ಕಾರವಾರ: ಅದೃಷ್ಟ ನೆಟ್ಟಗೆ ಇಲ್ಲದಿದ್ದರೆ ಸಾವು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ತಂದೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಹಿಳೆಯೊಬ್ಬರು ತನಗೆ ಆಗಾಗ ಕಾಡುತ್ತಿದ್ದ ಸೊಂಟ ನೋವಿನ ಬಗ್ಗೆ ವೈದ್ಯರಿಗೆ ಹೇಳಿಕೊಂಡಿದ್ದೇ ಜೀವಕ್ಕೆ ಮಾರಕವಾಯಿತು. ವೈದ್ಯರು ಕೊಟ್ಟ ಸಲಹೆಯಂತೆ ಆಕೆ ಅವರಿಂದ ಇಂಜೆಕ್ಷನ್‌ ಪಡೆಯುತ್ತಿದ್ದಂತೆ ಕುಸಿದು ಬಿದ್ದು ಜೀವ ಬಿಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ (Medical Negligence) ಸಾವಿಗೆ ಕಾರಣ ಎಂದು ಈಗ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಸ್ವಪ್ನ‌ ರಾಯ್ಕರ್ (32) ಮೃತ ದುರ್ದೈವಿ. ಸ್ವಪ್ನ ಕೊಪ್ಪಳ ಮೂಲದ ಮಹಿಳೆಯಾಗಿದ್ದಾರೆ. ಕಾರವಾರ ಹಳಗಾ ಗ್ರಾಮದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಆಸ್ಪತ್ರೆಯು ಪ್ಯಾರಾಲಿಸಿಸ್‌ಗೆ ಇಂಜೆಕ್ಷನ್ ಕೊಡುವುದಕ್ಕೆ ಖ್ಯಾತಿಯನ್ನು ಹೊಂದಿದೆ. ಹೀಗಾಗಿ ಇಲ್ಲಿಗೆ ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಪ್ರತಿ ನಿತ್ಯ ರೋಗಿಗಳು ಬರುತ್ತಾರೆ.

ಇದನ್ನೂ ಓದಿ: Free Bus service: ವೀಕೆಂಡ್‌ ರಷ್‌ ತಡೆಯಲು ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್‌ ಜಾರಿ?

ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಕುಟುಂಬಸ್ಥರು

ಈ ಹಿನ್ನೆಲೆಯಲ್ಲಿ ತಂದೆಗೆ ಇಂಜೆಕ್ಷನ್ ಕೊಡಿಸಲು ಕುಟುಂಬದೊಂದಿಗೆ ಸ್ವಪ್ನ ಸಹ ಬಂದಿದ್ದರು. ಆಗ ವೈದ್ಯರ ಬಳಿ ತಮ್ಮ ಸೊಂಟ ನೋವಿನ ಬಗ್ಗೆಯೂ ಸ್ವಪ್ನ ಹೇಳಿಕೊಂಡಿದ್ದಾರೆ. ಅದಕ್ಕೆ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಯಾವುದೇ ಸಮಸ್ಯೆ ಇಲ್ಲ. ಆದರೆ, ಪ್ಯಾರಾಲಿಸಿಸ್ ಆಗದಂತೆ ಮುಂಜಾಗ್ರತೆಯಾಗಿ ನಮ್ಮಲ್ಲಿ ಕೊಡುವ ಇಂಜೆಕ್ಷನ್ ಪಡೆಯಿರಿ ಎಂದು ಹೇಳಿದ್ದರು.

ಇದಕ್ಕೆ ಕ್ಷಣವೂ ಯೋಚಿಸದ ಸ್ವಪ್ನ, ಹೇಗೂ ವೈದ್ಯರೇ ಹೇಳುತ್ತಿದ್ದಾರೆ. ಪ್ಯಾರಾಲಿಸಿಸ್‌ ಸಹ ಮುಂದಿನ ದಿನಗಳಲ್ಲಿ ಬರುವುದಿಲ್ಲ. ಹೀಗಾಗಿ ಈಗಲೇ ಇಂಜೆಕ್ಷನ್‌ ತೆಗೆದುಕೊಂಡರೆ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ತಕ್ಷಣವೇ ವೈದ್ಯರಿಂದ ಇಂಜೆಕ್ಷನ್‌ ಅನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Video viral: ನಡುರಸ್ತೆಯಲ್ಲೇ ಮೈಮರೆತ ಹಾವುಗಳು; ಜನ ಕಂಡು ದಿಕ್ಕಾಪಾಲಾಯ್ತು; ವೈರಲ್ ಆಯ್ತು ಮಿಲನದ ವಿಡಿಯೊ!

ಇಂಜೆಕ್ಷನ್‌ ಪಡೆದ ಸ್ವಪ್ನ ಹಾಸಿಗೆಯಿಂದ ಎದ್ದು ನಿಲ್ಲುತ್ತಿದ್ದಂತೆ ಕುಸಿದುಬಿದ್ದಿದ್ದಾರೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ವೈದ್ಯರು ಬಂದು ತಪಾಸಣೆ ನಡೆಸಿದಾಗ ಸ್ವಪ್ನ ಮೃತಪಟ್ಟಿರುವುದು ದೃಢವಾಗಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ದೂರಿದ್ದಾರೆ. ಮೃತದೇಹವನ್ನು ಕಾರವಾರ ಜಿಲ್ಲಾ‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version