Site icon Vistara News

Medical Negligence : ಕೆಮ್ಮು, ಕಫಾ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಮೂರೇ ಗಂಟೆಯಲ್ಲಿ ಸಾವು!

Medical Negligence rubia dead

ದೇವನಹಳ್ಳಿ/ಕಲಬುರಗಿ: ಪ್ರತ್ಯೇಕ ಕಡೆಗಳಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ (Medical Negligence) ಎರಡು ಜೀವಗಳು ಪ್ರಾಣಬಿಟ್ಟಿವೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಕೆಮ್ಮು, ಕಫ ಎಂದು ಆಸ್ಪತ್ರೆ ಸೇರಿದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ರಾಬಿಯಾ ( 6 ) ಮೃತ ದುರ್ದೈವಿ.

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ವತ್ರೆಗೆ ವಿಜಯಪುರ ನಗರದ ದಾದಾಪೀರ್ ನಜಿಯಾ ಬಾನು ದಂಪತಿ ರಾಬಿಯಾಳನ್ನು ದಾಖಲು ಮಾಡಿದ್ದರು.

ಕೆಮ್ಮು, ಕಫದಿಂದ ಬಳಲುತ್ತಿದ್ದ ರಾಬಿಯಾಗೆ ಮೂರು ದಿನದಿಂದ ಜನರಲ್ ವಾರ್ಡ್‌‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ ಏಕಾಏಕಿ ಐಸಿಯುಗೆ ಶಿಫ್ಟ್‌ ಮಾಡಿದ್ದಾರೆ. ಬಳಿಕ ಮೂರು ಗಂಟೆ ನಂತರ ರಾಬಿಯಾ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದಕ್ಕೆ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೂರು ದಿನದಿಂದ ಚೆನ್ನಾಗಿ ಓಡಾಡುತ್ತಿದ್ದ ಮಗಳನ್ನು ವೈದ್ಯರು ಬಲಿ ಪಡೆದಿದ್ದಾರೆ ಎಂದು ಆಸ್ವತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Physical Abuse : ನನ್ನೊಟ್ಟಿಗೆ ಇರು ಎಂದ ಫೈನಾನ್ಸ್‌ ಸಿಬ್ಬಂದಿಗೆ ಮಹಿಳೆಯಿಂದ ಚಪ್ಪಲಿ ಸೇವೆ!

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವೃದ್ಧೆ ಸಾವು

ಕಲಬುರಗಿ ‌ಜಿಲ್ಲೆಯ ಯಡ್ರಾಮಿ‌ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಭವನದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ 60 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ನಿವಾಸಿ ನಾಗಮ್ಮ‌ಮಲ್ಲಪ್ಪ (60) ಮೃತರು.

ನಾಗಮ್ಮ ಶುಕ್ರವಾರ ಅಮಾವಾಸ್ಯೆ ಹಿನ್ನೆಲೆ ಕಡಕೋಳ ಮಡಿವಾಳೇಶ್ವರ ಮಠಕ್ಕೆ ಆಗಮಿಸಿದ್ದರು. ರಾತ್ರಿ ವಾಸ್ತವ್ಯ ಮಾಡಿ ಶನಿವಾರ ಬೆಳಗ್ಗೆ ಸ್ನಾನ‌ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಅವರನ್ನು ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ವೈದ್ಯರು‌ ಆಗಮಿಸದೆ ಇರುವುದರಿಂದ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version