ರಾಯಚೂರು: ರಾಯಚೂರು ರಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ (Medical negligence) ಆರೋಪ ಕೇಳಿಬಂದಿದೆ. ಆಪರೇಷನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದು, ಆಕ್ರೋಶಗೊಂಡ ಸಂಬಂಧಿಕರಿಂದ ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆದಿದೆ.
ವೈದ್ಯರ ನಿರ್ಲಕ್ಷ್ಯದಿಂದ ಹೀಗಾಗಿದೆ. ಯುವತಿ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಯುವತಿಯ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದು, ಪ್ರತಿಭಟನೆ ಮಾಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ರಾಜೇಶ್ವರಿ (19) ಮೃತ ಯುವತಿ. ಕಫ, ಮೂಗು ಕಟ್ಟಿದೆ ಎಂದು ಇವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳೆದ ಮೂರು ದಿನಗಳ ಹಿಂದೆಯೇ ದಾಖಲು ಮಾಡಲಾಗಿತ್ತು. ಈ ವೇಳೆ ರಾಜಶೇಖರ್ ಪಾಟೀಲ್ ಎಂಬ ವೈದ್ಯರು ರಾಜೇಶ್ವರಿಯ ಮೂಗಿನ ಆಪರೇಶನ್ ಮಾಡಿದ್ದರು ಎನ್ನಲಾಗಿದೆ. ಆಪರೇಷನ್ ಆದ ಕೆಲವೇ ಸಮಯದಲ್ಲಿ ರಾಜೇಶ್ವರಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮೃತಳ ಕುಟುಂಬಸ್ಥರು ಪ್ರತಿಭಟಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ | RBI Bond | ಆರ್‌ಬಿಐ ಬಾಂಡ್ ಬಡ್ಡಿ ದರ ಜನವರಿ 1ರಿಂದ 7.35%ಕ್ಕೆ ಏರಿಕೆ