ಬೆಂಗಳೂರು: ಜ್ವರ ಎಂದು ಆಸ್ಪತ್ರೆಗೆ ಅಡ್ಮಿಟ್ ಆದ ಯುವಕ ಮಸಣ ಸೇರುವಂತಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಯುವಕನೊಬ್ಬ (Medical Negligence) ಬಲಿಯಾದಂತೆ ಆಗಿದೆ. ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿ ವಿಜೇತ್‌ಗೆ (25) ಮೃತ ದುರ್ದೈವಿ.
ವಿಜೇತ್‌ಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಮನೆಯ ಸಮೀಪದ ಕ್ಲಿನಿಕ್‌ಗೆ ತೆರಳಿ ಇಂಜೆಕ್ಷನ್ ಪಡೆದು ಮನೆಗೆ ವಾಪಸ್ ಆಗಿದ್ದರು. ಆದರೆ ಮಾರೆನೆ ದಿನ ಸೆಪ್ಟಿಕ್ ಆಗಿದ್ದರಿಂದ ರಾಮಮೂರ್ತಿನಗರದ ಕೋಶಿಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ ವೈದ್ಯರು ವಿಜೇತ್‌ಗೆ ಸರ್ಜರಿ ಆಗಬೇಕು ಎಂದು ತಿಳಿಸಿದ್ದಾರೆ. ಆದರೆ ಸರ್ಜರಿ ವೇಳೆ ತೀವ್ರ ರಕ್ತಸ್ರಾವ ಆಗಿದ್ದು, ರಕ್ತ ತರುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ರಕ್ತ ಕೊಡುವ ಪ್ರಕ್ರಿಯೆ ವೇಳೆ ಯುವಕನಿಗೆ ಹೃದಯ ಸ್ತಂಭನವಾಗಿದ್ದು, ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Book Release: ನಿಲ್ಲು ನಿಲ್ಲೆ ಪತಂಗ ಮತ್ತು ಮಾಸ್ತಿ ಸಾಹಿತ್ಯ ಪರಿಚಯ ಪುಸ್ತಕ ಬಿಡುಗಡೆ
ಇದರಿಂದ ಆಘಾತಕ್ಕೆ ಒಳಗಾದ ವಿಜೇತ್ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿರುವುದಾಗಿ ಕಿಡಿಕಾರಿದ್ದಾರೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ