ಬೆಂಗಳೂರು: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಶುದ್ಧ ಮತ್ತು ಸುರಕ್ಷಿತ ಅಣು ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, (MEIL) ರಾಜ್ಯದ ಕೈಗಾ ಸ್ಥಾವರದಲ್ಲಿ 2×700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ ರೂಪಿಸಿದೆ.
ಇದಕ್ಕಾಗಿ ಎನ್‌ಪಿಸಿಎಲ್ ತನ್ನ ಈವರೆಗಿನ ಬೃಹತ್ ಮೊತ್ತ ಎನ್ನಬಹುದಾದ 12,799 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ದೇಶದ ಪ್ರಖ್ಯಾತ ಮೂಲಸೌಕರ್ಯ ಸಂಸ್ಥೆ ಎಂ.ಇ.ಐ.ಎಲ್ ಈ ವಿದ್ಯುತ್ ಸ್ವಾವಲಂಬಿ ನಿರ್ಮಾಣ ಟೆಂಡರ್ ಅನ್ನು (Bengaluru News) ತನ್ನದಾಗಿಸಿಕೊಂಡಿದೆ.
ಅಣುಶಕ್ತಿ ಇಲಾಖೆಯ ಅಧೀನದಲ್ಲಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ನಡೆಸುವ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಗುತ್ತಿಗೆಗೆ ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಅತ್ಯಂತ ಕಡಿಮೆ ಬಿಡ್‌ದಾರನಾಗಿ ಹೊರಹೊಮ್ಮಿದೆ. ಈ ಪ್ರತಿಷ್ಠಿತ ಯೋಜನೆಯು ಕರ್ನಾಟಕದ ಕೈಗಾದಲ್ಲಿ ನಿರ್ಮಾಣವಾಗಲಿದ್ದು, ಶುದ್ಧ ಮತ್ತು ವಿಶ್ವಾಸಾರ್ಹ ಪರಮಾಣು ಶಕ್ತಿಯತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ: Book Release: ಬೆಂಗಳೂರಿನಲ್ಲಿ ಜೂ.29ರಂದು ‘ಭಾವರಾಮಾಯಣ ರಾಮಾವತರಣʼ ಪುಸ್ತಕ ಲೋಕಾರ್ಪಣೆ
ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ (ಕ್ಯೂಸಿಬಿಎಸ್) ವಿಧಾನವನ್ನು ಪರಿಚಯಿಸುವುದರೊಂದಿಗೆ ಈ ಯೋಜನೆಯು ಮಹತ್ವ ಪಡೆದುಕೊಂಡಿದ್ದು, ಈ ಕಠಿಣ ಯೋಜನೆ ಜಾರಿಗೆ ತಾಂತ್ರಿಕ ಪರಿಣಿತಿ ಮತ್ತು ಕಡಿಮೆ ವೆಚ್ಚದ ವಿದ್ಯುತ್ ಉತ್ಪಾದನೆ ಹಾದಿ ಸುಗಮಗೊಳಿಸಲಿದೆ.
ಟೆಂಡರ್ ಪ್ರಕ್ರಿಯೆಯು ಮೇ 2023ರಲ್ಲಿ ಪ್ರಾರಂಭವಾಯಿತು, ತಾಂತ್ರಿಕ ಬಿಡ್ ಅಕ್ಟೋಬರ್ 2023 ರಲ್ಲಿ ತೆರೆಯಲ್ಪಟ್ಟಿತು. ಅತ್ಯಂತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆಗಳಾದ ಬಿಎಚ್ಇಎಲ್, ಎಲ್ ಅಂಡ್ ಟಿ ಮತ್ತು ಎಂಇಐಎಲ್ ಆಸಕ್ತಿ ತೋರಿಸಿತ್ತು. ಎಂಇಐಎಲ್ 12,799.92 ಕೋಟಿ ರೂ.ಗಳ ಕನಿಷ್ಠ ಬಿಡ್ ಸಲ್ಲಿಸುವ ಮೂಲಕ ತನ್ನ ಅಸಾಧಾರಣ ತಾಂತ್ರಿಕ ಸಾಮರ್ಥ್ಯ ಮತ್ತು ವೆಚ್ಚ-ದಕ್ಷತೆಯನ್ನು ಪ್ರದರ್ಶಿಸುವ ಮೂಲಕ ಅತ್ಯಂತ ಕಡಿಮೆ ಬಿಡ್‌ದಾರನಾಗಿ ಹೊರಹೊಮ್ಮುವ ಮೂಲಕ ನಿರ್ಮಾಣ ಕಾರ್ಯದ ಜವಾಬ್ದಾರಿ ವಹಿಸಿಕೊಂಡಿದೆ.
“ಈ ಒಪ್ಪಂದವು ಎಂಇಐಎಲ್‌ಗೆ ಮಹತ್ವದ ಯೋಜನೆ ಜತೆಗೆ ಪರಮಾಣು ಇಂಧನ ಕ್ಷೇತ್ರದ ಪ್ರವೇಶಕ್ಕೆ ಸಮರ್ಥ ವೇದಿಕೆಯಾಗಿದೆ ” ಎಂದು ಎಂಇಐಎಲ್ ನಿರ್ದೇಶಕ ಸಿ.ಎಚ್.ಸುಬ್ಬಯ್ಯ ಹೇಳಿದ್ದಾರೆ.
ಇದನ್ನೂ ಓದಿ: Bengaluru News: ಗೋ ಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ಗೋಪ್ರೇಮಿ ಮಹೇಂದ್ರ ಮುನ್ನೋತ್
“ಉತ್ಕೃಷ್ಟತೆ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿರುವ ಎಂಇಐಎಲ್ ಈ ಯೋಜನೆ ಮೂಲಕ ದೇಶದ ಶುದ್ಧ ಇಂಧನ ಪರಿಹಾರ ಮತ್ತು ಸ್ವಾವಲಂಬನೆಗೆ ಕೊಡುಗೆ ನೀಡಲು ಉತ್ಸುಕವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.