Site icon Vistara News

MEIL Products: ಇಂಧನ ಸಪ್ತಾಹ; ಎಂಇಐಎಲ್‌ ಸಂಸ್ಥೆಯಿಂದ ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನಾವರಣ

MEIL Products

#image_title

ಬೆಂಗಳೂರು: ಭಾರತದ ಜಿ- 20 ಅಧ್ಯಕ್ಷತೆಯ ಮೊದಲ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಭಾರತ ಇಂಧನ ಸಪ್ತಾಹ -2023 (ಇಂಡಿಯಾ ಎನರ್ಜಿ ವೀಕ್)ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಇದು ಇಂಧನ ಕ್ಷೇತ್ರದಲ್ಲಿನ ದೇಶಿಯ ಸಂಸ್ಥೆಗಳ ಸಾಧನೆಗಳ ಅನಾವರಣಕ್ಕೆ ವೇದಿಕೆ ಸೃಷ್ಟಿಸಿದೆ.

ಸಾರಿಗೆ, ಇಂಧನ, ಉತ್ಪಾದನಾ ಕ್ಷೇತ್ರ ಸೇರಿ ಹಲವು ರಂಗಗಳಲ್ಲಿ ಸಾಧನೆ ಮೆರೆಯುತ್ತಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) (MEIL Products), ದೇಶಿಯ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವ ತನ್ನ ಅಂಗ ಸಂಸ್ಥೆಗಳಾದ ಡ್ರಿಲ್ಮೆಕ್ ಎಸ್‌ಪಿಎ, ಪೆಟ್ರೆವೆನ್ ಎಸ್‌ಪಿಎ, ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್), ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಮತ್ತು ಐಕಾಮ್ ಟೆಲಿ ಲಿಮಿಟೆಡ್ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಹೊಂದಿರುವ ಪಾಲುದಾರಿಕೆಯನ್ನು ಮುಂದಿರಿಸಿದೆ.

ಎಂಇಐಎಲ್‍ನ ಈ ಸಂಸ್ಥೆಗಳು ತೈಲ ಮತ್ತು ಅನಿಲ, ನಗರ ಅನಿಲ ವಿತರಣೆ, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸೇರಿ ವಿವಿಧ ಇಂಧನ ಕ್ಷೇತ್ರಗಳಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದ್ದು, ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ, ಹೈಡ್ರೋಕಾರ್ಬನ್ ವಿಭಾಗದ ನಿರ್ದೇಶಕ ದೋರಯ್ಯ ಮತ್ತು ಇತರ ಉನ್ನತ ನಿರ್ವಹಣಾ ಸದಸ್ಯರು, ಈ ಭಾರತದ ಮೊದಲ ಇಂಧನ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಭಾಗವಹಿಸಿ ದೇಶ- ವಿದೇಶಗಳ ರಾಯಭಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್

ಒಲೆಕ್ಟ್ರಾ ತನ್ನ ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ಅನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಈ ಟಿಪ್ಪರ್ ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ ಮತ್ತು ಎರಡು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದು ಸ್ಟ್ಯಾಂಡರ್ಡ್ 16 ಕ್ಯೂಬಿಕ್ ಮೀಟರ್ ಲೋಡ್ ಬಾಡಿ ಹೊಂದಿದ್ದು, ವಿವಿಧ ವಿನ್ಯಾಸಗಳಲ್ಲಿ ಲಭ್ಯವಾಗಲಿದೆ. ಒಟ್ಟು ವಾಹನ ತೂಕ (ಜಿವಿಡಬ್ಲ್ಯೂ) 28,000 ಕೆಜಿ ಆಗಿದ್ದು, ಟಿಪ್ಪಿಂಗ್ ಕೋನ ಗರಿಷ್ಠ 46 ಡಿಗ್ರಿ, ಗರಿಷ್ಠ ಗ್ರೇಡೆಬಿಲಿಟಿ 25%, ಗರಿಷ್ಠ ಟಾರ್ಕ್ 2,400 ಎನ್ಎಂ ಮತ್ತು 6X4 ಆಕ್ಸಲ್ ಕಾನ್ಫಿಗರೇಶನ್ ಹೊಂದಿದೆ. ಇದು ಸಾರಿಗೆ ಉದ್ಯಮದ ಗೇಮ್ ಚೇಂಜರ್ ಆಗಲಿದೆ.

ಈ ಸಂದರ್ಭದಲ್ಲಿ ಎಂಇಐಎಲ್‍ನ ಹೈಡ್ರೋಕಾರ್ಬನ್ ವಿಭಾಗದ ನಿರ್ದೇಶಕ ದೊರಯ್ಯ ಮಾತನಾಡಿ, ಇಂದಿನ ಇಂಧನ ಕ್ಷೇತ್ರವು ಸ್ಪರ್ಧಾತ್ಮಕ ಮತ್ತು ಸವಾಲಿನಿಂದ ಕೂಡಿದೆ. ಇಂದಿನ ಅಗತ್ಯಗಳನ್ನು ಪೂರೈಸಲು ಮತ್ತು 2070ರ ವೇಳೆಗೆ ಇಂಗಾಲ ಹೊರ ಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಇಳಿಸುವ ಪ್ರಧಾನಿ ಮೋದಿಯವರ ಪ್ರತಿಜ್ಞೆ ಮತ್ತು ಅಮೃತ್ ಕಾಲ್ ಅವರ ದೃಷ್ಟಿಕೋನದ ಮೇಲೆ ಕೆಲಸ ಮಾಡಲು ಈ ಸಮ್ಮೇಳನವು ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.

ಸಪ್ತಾಹದ ಪ್ರಮುಖ ಉದ್ದೇಶವಾದ ʼಬೆಳವಣಿಗೆ, ಸಹಯೋಗ, ಪರಿವರ್ತನೆʼಗೆ ಅನುಗುಣವಾಗಿ, ಎಂಇಐಎಲ್‍ ಕಂಪನಿಗಳು ಇಂಗಾಲದ ತೀವ್ರತೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸಿ ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತದ ದೀರ್ಘಕಾಲೀನ ಇಂಧನ ಭದ್ರತೆಯನ್ನು ಸುಸ್ಥಿರವಾಗಿ ಖಚಿತಪಡಿಸುವತ್ತ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ. ಭಾರತವು ಇಂಧನ ಪರಿವರ್ತನೆಯ ಶಕ್ತಿ ಕೇಂದ್ರದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದು, ಇದಕ್ಕೆ ಎಂಇಐಎಲ್ ತನ್ನ ಅಂಗ ಸಂಸ್ಥೆಗಳಾದ ಡ್ರಿಲ್ಮೆಕ್, ಪೆಟ್ರೆವೆನ್, ಒಲೆಕ್ಟ್ರಾ ಗ್ರೀನ್‍ಟೆಕ್, ಎಂಸಿಜಿಡಿಪಿಎಲ್ ಮತ್ತು ಐಕಾಮ್ ಮೂಲಕ ಕೊಡುಗೆ ನೀಡುತ್ತಿದೆ ಎಂದು ದೊರಯ್ಯ ಪ್ರತಿಪಾದಿಸಿದರು.

ಕಡಿಮೆ ಇಂಗಾಲದ ಆರ್ಥಿಕತೆಯಲ್ಲಿ ಎಂಇಐಎಲ್‌ನ ಪಾತ್ರವು ಹಿರಿದಾಗಿದ್ದು, ಮೇಘಾ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಪ್ರೈವೇಟ್ ಲಿಮಿಟೆಡ್ (ಎಂಸಿಜಿಡಿಪಿಎಲ್) ನಗರ ಅನಿಲ ವಿತರಣಾ ವ್ಯವಸ್ಥೆಯ ಮೂಲಕ 80 ಸಿಎನ್‍ಜಿ ಕೇಂದ್ರಗಳನ್ನು ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಸಿಜಿಡಿ ಕಂಪನಿಯಾಗಿದ್ದು, ದೃಢವಾದ ಮೂಲಸೌಕರ್ಯದ ಮೂಲಕ ಇಂಧನ ಸುರಕ್ಷತೆಯನ್ನು ಖಚಿತಪಡಿಸುತ್ತಿದೆ. ಇದು 22 ಭೌಗೋಳಿಕ ಪ್ರದೇಶಗಳಲ್ಲಿ ಹತ್ತು ಭಾರತೀಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಇದು ಭಾರತದ ಸುಮಾರು ಶೇ.10 ಪ್ರದೇಶ ಮತ್ತು ಅದರ ಜನಸಂಖ್ಯೆಯ ಸುಮಾರು ಶೇ.7 ಅನ್ನು ಒಳಗೊಂಡಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಇದನ್ನೂ ಓದಿ | PLI Scheme: ಫಲ ನೀಡುತ್ತಿರುವ ಪಿಎಲ್‌ಐ ಯೋಜನೆ, 45,000 ಕೋಟಿ ರೂ. ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ: ನೀತಿ ಆಯೋಗ

ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್‍ನ ಎಲೆಕ್ಟ್ರಿಕ್ ಬಸ್‌ಗಳ ಸಮೂಹವು ಭಾರತದ 13 ರಾಜ್ಯಗಳಲ್ಲಿ ಸಂಚರಿಸುತ್ತಿದ್ದು, ಭಾರತದಾದ್ಯಂತ 90,000 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ, ಎಂಇಐಎಲ್ ಗುಜರಾತ್‍ನಲ್ಲಿ ಭಾರತದ ಮೊದಲ ಕಾಲುವೆ ಮೇಲಿನ ಸೌರ ಯೋಜನೆ ಸೇರಿ ಹಲವಾರು ಸೌರ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಇದು ನೀರನ್ನು ಬಾಷ್ಪೀಕರಣದಿಂದ (ಆವಿಯಾಗುವಿಕೆ) ಸಂರಕ್ಷಿಸುವ ವಿಶಿಷ್ಟ ಯೋಜನೆಯಾಗಿದೆ.

ಇಂಧನ ಕ್ಷೇತ್ರದಲ್ಲಿ ಬಲವಾದ ಉಪಸ್ಥಿತಿಯು ದೇಶದ ಇಂಧನ ಬೇಡಿಕೆಗಳನ್ನು ಪೂರೈಸಲು ಅನುವು ಮಾಡಿಕೊಡುವ ಮಹತ್ವದ ಕಂಪನಿಗಳಲ್ಲಿ ಎಂಇಐಎಲ್ ಒಂದಾಗಿದೆ. ಇದು ಭಾರತದಲ್ಲಿ ಶುದ್ಧ ಇಂಧನ ಪರಿವರ್ತನೆಯನ್ನು ತ್ವರಿತಗೊಳಿಸಲು ಉತ್ತಮ ಇಂಧನ ವ್ಯವಸ್ಥೆಯನ್ನು ರಚಿಸುವತ್ತ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಿದೆ.

Exit mobile version