Site icon Vistara News

Mekedatu Project: ಮೇಕೆದಾಟು ಯೋಜನೆಗೆ ಒತ್ತಾಯ; ಭೂಮಿ ಪೂಜೆ ಮಾಡಲು ಮುಂದಾದ ರೈತರು ಪೊಲೀಸರ ವಶಕ್ಕೆ

Mekedatu Project

#image_title

ರಾಮನಗರ: ನಿಷೇಧಾಜ್ಞೆ ವಿಧಿಸಿದರೂ ಮೇಕೆದಾಟು ಯೋಜನೆಗೆ ಭೂಮಿ ಪೂಜೆ ಮಾಡಲು ಮುಂದಾದ ರೈತರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ. ಮೇಕೆದಾಟು ಯೋಜನೆ (Mekedatu Project) ಜಾರಿಗಾಗಿ ಒತ್ತಾಯಿಸಿ ಮೇಕೆದಾಟು ಹೋರಟ ಸಮಿತಿ ಹಾಗೂ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭೂಮಿ ಪೂಜೆಗೆ ಮುಂದಾಗಿದ್ದರಿಂದ ರೈತರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | Budget 2023 : ಭದ್ರಾ ಮೇಲ್ದಂಡೆಗೆ ಅನುದಾನ: ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ ಜಾರಿಗಾಗಿ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಜ.31 ಮತ್ತು ಫೆ.1ರಂದು ಜಿಲ್ಲೆಯ ಕನಕಪುರ ತಾಲೂಕು ಉಯ್ಯಂಬಳ್ಳಿ ವ್ಯಾಪ್ತಿಯ ಮೇಕೆದಾಟು ಹಾಗೂ ಸಂಗಮ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ ಕನಕಪುರ ತಹಸೀಲ್ದಾರ್‌ ಆದೇಶವನ್ನು ಹೊರಡಿಸಿದ್ದರು. ಪ್ರವೇಶಕ್ಕೆ ನಿರ್ಬಂಧ ಇದ್ದರೂ ಭೂಮಿಪೂಜೆ ಮಾಡಲು ಮುಂದಾಗಿದ್ದರಿಂದ ರೈತ ಹೋರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ.

Exit mobile version