Site icon Vistara News

Karnataka Budget 2024 : ಕರ್ನಾಟಕದ ಕರಾವಳಿಯ ನದಿಗಳ ಮೇಲೆ ಮೆಟ್ರೊ; ಏನಿದು ಹೊಸ ಯೋಜನೆ?

Water Metro

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳು ಅನುಷ್ಠಾನಗೊಂಡರೆ ಕರ್ನಾಟಕದ ಕರಾವಳಿ ಪ್ರದೇಶದ ನದಿ ನೀರಿನಲ್ಲಿ ವಾಟರ್ ಮೆಟ್ರೊ ಓಡಲಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವ ಜತೆಗೆ ಜನರ ಓಡಾಟಕ್ಕೂ ಅನುಕೂಲವಾಗಲಿದೆ.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು ಎಂದು ಹೇಳಿದರು. ಹೀಗಾಗಿ ಏನಿದು ಮೆಟ್ರೊ ಎಂಬ ಕುತೂಹಲ ಮೂಡಿದೆ. ಅದರ ವಿವರ ಇಲ್ಲಿದೆ.

ವಾಟರ್‌ ಮೆಟ್ರೋ ಎಂಬುದು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಬೋಟ್​ಗಳಾಗಿವೆ. ನಗರ ಸಮೂಹ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲೇ ಇದು ಕೂಡ ಕಾರ್ಯಾಚರಿಸುತ್ತದೆ. ಮೊದಲ ವಾಟರ್ ಮೆಟ್ರೋ ಸೇವೆ ಆರಂಭಗೊಂಡಿದ್ದು ಕೇರಳದ ಕೊಚ್ಚಿನ್‌ನಲ್ಲಿ . ಈ ಹೈಬ್ರಿಡ್ ಬೋಟ್‌ಗಳು ಕೊಚ್ಚಿನ್ ಸುತ್ತಮುತ್ತ ಇರುವ 10 ದ್ವೀಪಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಬ್ಯಾಟರಿ ಮತ್ತು ಡೀಸೆಲ್​ ಚಾಲಿತ ಮೋಟಾರ್ ಇದರಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಇದು ಬೇಕಾದ ಇಂಧನ ಬಳಸಿಕೊಂಡು ಸಂಚರಿಸುತ್ತದೆ. ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ ಕ್ಯಾಪ್ಟನ್​ಗೆ ಥರ್ಮಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಪಘಾತ ತಪ್ಪಿಸಲು ರಾಡಾರ್​ ವ್ಯವಸ್ಥೆ ಕೂಡ ಇದೆ. ಕೇವಲ 15 ನಿಮಿಷದಲ್ಲೇ ಇದು ರಿಚಾರ್ಜ್​ ಆಗುವ ಸಾಮರ್ಥ್ಯ ಹೊಂದಿದೆ. ಇದು ಒಂದು ಗಂಟೆಗೆ 10 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುತ್ತದೆ.

ಇದನ್ನೂ ಓದಿ : Karnataka Budget 2024: ತೀರ್ಥ ಯಾತ್ರಿಕರಿಗೆ ವಸತಿ, ಅರ್ಚಕರ ಖಾತೆಗೆ ನೇರ ಹಣ; ಸಿದ್ದು ಘೋಷಣೆ

ಕರ್ನಾಟಕದಲ್ಲಿ ದಕ್ಷಿಣ ಕನ್ನಡದ ಮಂಗಳೂರಿನ ಗುರುಪುರ ಹಾಗೂ ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ನದಿ ಸಮುದ್ರಕ್ಕೆ ಸೇರುವ ಅಳಿವೆ ಪ್ರದೇಶದಲ್ಲಿರುವ ಜನರ ಸಂಚಾರಕ್ಕೆ ಇದನ್ನು ಬಳಸಬಹುದು ಎಂದು ಹೇಳಲಾಗಿದೆ.

ಕೇರಳದ ಜಲ ಮೆಟ್ರೊದ ವಿಶೇಷತೆ ಏನು?

Exit mobile version