ಬೆಂಗಳೂರು: 2024ರ ವೇಳೆಗೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಮೆಟ್ರೊ 4ನೇ ಹಂತದಲ್ಲಿ (Metro Phase 4) ಬಿಡದಿ ಮಾಗಡಿಗೆ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ 4ನೇ ಹಂತದ ಡಿಪಿಆರ್ ಸಿದ್ಧಪಡಿಸಿದ್ದು, ಕೇಂದ್ರದ ಅನುಮೋದನೆ ಬಾಕಿ ಇದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯು ಮುಗಿಯದ ಸಮಸ್ಯೆಯಾಗಿದೆ. ಮೆಟ್ರೋ ಸೇವೆ ಬಂದರೂ ಟ್ರಾಫಿಕ್ ಏನೂ ಕಡಿಮೆ ಆಗಿಲ್ಲ ಎನ್ನುವಂತಾಗಿದೆ. ಆದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಡಿಮೆ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ. ಈಗಾಗಲೇ 3ನೇ ಹಂತದ ಕಾಮಗಾರಿಗೆ ₹23 ಸಾವಿರ ಕೋಟಿಗೆ ಅನುಮೋದನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಈಗ 4ನೇ ಹಂತದ ಡಿಪಿಆರ್ ಸಿದ್ಧಪಡಿಸಿದ್ದು, ಕೇಂದ್ರದ ಅನುಮೋದನೆಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: Vijayapura tremor : ವಿಜಯಪುರದ ತಿಕೋಟಾ ತಾಲೂಕಿನ ಹಲವು ಹಳ್ಳಿಗಳ್ಳಲ್ಲಿ ಮತ್ತೆ ಕಂಪಿಸಿದ ಭೂಮಿ
ನಮ್ಮ ಮೆಟ್ರೋ ಕಾಮಗಾರಿ ವಿವರ ಹೀಗಿದೆ
• 2024ರ ವೇಳೆಗೆ ಎರಡನೇ ಹಂತದ ಎಲ್ಲ ಮಾರ್ಗಗಳಲ್ಲಿ ಮೆಟ್ರೊ ಸಂಚಾರ ಆರಂಭವಾಗಲಿವೆ.
• ಜೆ.ಪಿ. ನಗರ ನಾಲ್ಕನೇ ಹಂತದಿಂದ ಹೆಬ್ಬಾಳ ಸಂಪರ್ಕಿಸುವ 31 ಕಿ.ಮೀ ಮಾರ್ಗ
• ಹೊಸಹಳ್ಳಿಯಿಂದ ಕಡಬಗೆರೆಗೆ 12 ಕಿ.ಮೀ ಮಾರ್ಗಗಳಿಗೆ ಡಿಪಿಆರ್ ಸಿದ್ಧವಾಗಿದೆ.
• ₹ 16,328 ಕೋಟಿ ವೆಚ್ಚದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಬೇಕಿದೆ.
• ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ 37 ಕಿ.ಮೀ. ಮಾರ್ಗವು ಸುರಂಗ ಮಾರ್ಗದಲ್ಲಿ 17 ಕಿ.ಮೀ ಸಾಗುತ್ತದೆ.
• ಇಲ್ಲೂರು, ಕೋರಮಂಗಲ, ಕಾವೇರಿ ಥಿಯೇಟರ್ ಮೂಲಕ ಹಾದು ಹೋಗಲಿದೆ.
• ನಂತರ ಮಾಗಡಿ, ಬಿಡದಿ ಮಾರ್ಗದ ಯೋಜನೆ ಸಿದ್ಧವಾಗಲಿದೆ.